ವಿಟ್ಲ : ಎಸ್ಸೆಸ್ಸೆಫ್ ಡಿವಿಷನ್ ಮಹಾಸಭೆ

ವಿಟ್ಲ, ಡಿ. 26: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವಿಟ್ಲ ಡಿವಿಷನ್ ಇದರ ವಾರ್ಷಿಕ ಮಹಾಸಭೆಯು ಬೈರಿಕಟ್ಟೆಯ ಎಸ್ಸೆಸ್ಸೆಫ್ ಕಚೇರಿಯಲ್ಲಿ ಡಿವಿಷನ್ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ಸಖಾಫಿ ಕೆಲಿಂಜ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ದಾರುಲ್ ಅಶ್-ಅರಿಯ್ಯಾ ಮ್ಯಾನೇಜರ್ ಮುಹಮ್ಮದಲಿ ಸಖಾಫಿ ಸುರಿಬೈಲು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಪೆಲ್ತಡ್ಕ ವಾರ್ಷಿಕ ವರದಿಯನ್ನು, ಕ್ಯಾಂಪಸ್ ಕಾರ್ಯದರ್ಶಿ ಜಂಶಾದ್ ಕಂಬಳಬೆಟ್ಟು ಕ್ಯಾಂಪಸ್ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ವಿಟ್ಲ ಸೆಂಟರ್ ಅಧ್ಯಕ್ಷ ಅಬ್ದುಲ್ ಹಮೀದ್ ಸಖಾಫಿ ಪಾಡಿ ಮಾತನಾಡಿದರು. ಈ ಸಂದರ್ಭ ಬಿ.ಇ(ಸಿವಿಲ್) ಪದವಿ ಪಡೆದ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿಯಾಗಿದ್ದ ಜಂಶಾದ್ ಕಂಬಳಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಅಬ್ದುಲ್ ರಶೀದ್ ಹಾಜಿ ವಗ್ಗ ಅವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು, ಪ್ರಧಾನ ಕಾರ್ಯದರ್ಶಿಯಾಗಿ ವಿ.ಎಂ ಅಬೂಬಕ್ಕರ್ ಹಿಮಮಿ ಸಖಾಫಿ, ಕೋಶಾಧಿಕಾರಿಯಾಗಿ ಸಿ.ಎಚ್. ಅಬ್ದುಲ್ ಖಾದರ್ ಕೊಡಂಗಾಯಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಾಹಿರ್ ಕೊಳಂಬೆ, ಉಪಾಧ್ಯಾಕ್ಷರುಗಳಾಗಿ ಅಬ್ದುಲ್ ರಝಾಕ್ ಪೆಲ್ತಡ್ಕ ಹಾಗೂ ರಫೀಕ್ ಸಅದಿ ಅಳಕೆಮಜಲು, ಕಾರ್ಯದರ್ಶಿಗಳಾಗಿ ಅಶ್ಫಾಕ್ ಕೊಡಂಗಾಯಿ ಹಾಗೂ ಜಂಶಾದ್ ಕಂಬಳಬೆಟ್ಟು ಇವರನ್ನೊಳಗೊಂಡ 21 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಎಸ್ ವೈ ಎಸ್ ವಿಟ್ಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಲಪದವು, ಎಂ.ಕೆ.ಎಂ ಸಖಾಫಿ ಕೊಡಂಗಾಯಿ, ಮುಸ್ತಫಾ ಕೋಡಪದವು, ಕೆಸಿಎಫ್ ನಾಯಕರಾದ ಸಿದ್ದೀಕ್ ಸಖಾಫಿ ಪೆರುವಾಯಿ ಮೊದಲಾದವರು ಉಪಸ್ಥಿತರಿದ್ದರು. ರಝಾಕ್ ಪೆಲ್ತಡ್ಕ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಹಿಮಮಿ ವಂದಿಸಿದರು.