ಎನ್ವಿಗ್ರೀನ್ ಮಿಸ್ ಆ್ಯಂಡ್ ಮಿಸೆಸ್ ಮಂಗಳೂರು ಸ್ಪರ್ಧೆ: ಅಮಾಂಡಾ ಲಸ್ರಾದೊ, ಲಿವಿಯಾ ಡಿ ಅಲ್ಮೇಡಾ ಆಯ್ಕೆ

ಮಂಗಳೂರು, ಡಿ. 27: ನಗರದ ರೇಗೋ ಇವೆಂಟ್ಸ್ ಪ್ರೈ. ಲಿಮಿಟೆಡ್ ಸಂಸ್ಥೆ ಆಯೋಜಿಸಿದ್ದ ಎನ್ವಿಗ್ರೀನ್ ಮಿಸ್ ಆ್ಯಂಡ್ ಮಿಸೆಸ್ ಮಂಗಳೂರು-2018 ಸ್ಪರ್ಧೆಯಲ್ಲಿ ಅಮಾಂಡಾ ಲಸ್ರಾದೊ ಅವರು ಎನ್ವಿಗ್ರೀನ್ ಮಿಸ್ ಮಂಗಳೂರು ಹಾಗೂ ಲಿವಿಯಾ ಡಿ ಅಲ್ಮೇಡಾ ಮಿಸೆಸ್ ಮಂಗಳೂರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನಗರದ ಸಿಟಿ ಬೀಚ್‌ನಲ್ಲಿ ಸ್ಪರ್ಧೆಯ ಅಂತಿಮ ಸುತ್ತಿನ ಆಯ್ಕೆ ಜರಗಿತು. ಎನ್ವಿಗ್ರೀನ್ ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ನಿಶಿತಾ ಫೆರ್ನಾಂಡೀಸ್ ಅವರು ಪ್ರಥಮ ರನ್ನರ್ಸ್ ಅ್, ಪ್ರಜ್ಞಾ ದ್ವಿತೀಯ ರನ್ನರ್ಸ್ , ಮಿಸ್ಟ್ರೇಸ್ ಮಂಗಳೂರು ವಿಭಾಗದಲ್ಲಿ ತೇಜಸ್ವಿನಿ ಶೆಟ್ಟಿ ಪ್ರಥಮ ರನ್ನರ್ಸ್ ಅಫ್,ಅನಿತಾ ಸೋನ್ಸ್ ದ್ವಿತೀಯ ರನ್ನರ್ಸ್ ಅಫ್ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಲಿವಿಯಾ ಡಿ. ಅಲ್ಮೇಡಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಿಸ್ ಮಂಗಳೂರು ವಿಭಾಗದಲ್ಲಿ ಪ್ರಜ್ಞಾ ಮಿಸ್ ಫೋಟೋಜೆನಿಕ್, ಅಮಾಂಡ ಲಸ್ರಾದೋ ಮಿಸ್ ರ್ಯಾಂಪ್‌ವಾಕ್, ಸೋನಿಯಾ ಕೋರೆ ಮಿಸ್ ಬಾಡಿಫಿಟ್, ಅಶ್ವಿನಿ ಮಿಸ್ ಗುಡ್‌ನೆಸ್ ಅಂಬಾಸೆಡರ್, ನಿಶಿತಾ ಫೆರ್ನಾಂಡೀಸ್ ಮಿಸ್ ಬ್ಯೂಟ್ ಫುಲ್ ಸ್ಮೈಲ್, ಶ್ರಾವ್ಯ ಮಿಸ್ ಸೋಶಿಯಲ್ ಮೀಡಿಯಾ ಐಕನ್, ರಕ್ಷಾ ಮಿಸ್ ಮೋಸ್ಟ್ ಟ್ಯಾಲೆಂಟೆಡ್, ಸ್ವಾತಿ ಎಸ್. ಕುಲಾಲ್ ಮಸ್ಟರ್ಡ್ ಪ್ರಿನ್ಸೆಸ್ ಹಾಗೂ ಅಶ್ವಿನಿ ಮಸ್ಟರ್ಡ್ ಕ್ಯೂನ್ ಪುರಸ್ಕಾರ ಗಳಿಸಿದ್ದಾರೆ.
ಮಿಸೆಸ್ ಮಂಗಳೂರು ವಿಭಾಗದಲ್ಲಿ ವೀಣಾ ಡಿಸೋಜ ಮಿಸೆಸ್ ಫೋಟೋಜೆನಿಕ್, ಲಿವಿಯಾ ಡಿ ಅಲ್ಮೇಡಾ ಮಿಸ್ಟ್ರೇಸ್ ರ್ಯಾಂಪ್‌ವಾಕ್, ಸ್ಮಿತಾ ದಾಮೋದರ್ ಮಿಸೆಸ್ ಬಾಡಿಫಿಟ್, ವಾ ಲೆಟ್ ಪಿರೇರಾ ಮಿಸೆಸ್ ಗುಡ್‌ನೆಸ್ ಅಂಬಾಸೆಡರ್, ಅನಿತಾ ಸೋನ್ಸ್ ಮಿಸೆಸ್ ಬ್ಯೂಟ್ ಫುಲ್ ಸ್ಮೈಲ್, ಲಿವಿಯಾ ಡಿ ಅಲ್ಮೇಡಾ ಮಿಸೆಸ್ ಸೋಶಿಯಲ್ ಮೀಡಿಯಾ ಐಕನ್, ಮಮತಾ ರೆಬೆಲ್ಲೋ ಮಿಸೆಸ್ ಮೋಸ್ಟ್ ಟ್ಯಾಲೆಂಟ್ ಪುರಸ್ಕಾರ ಪಡೆದುಕೊಂಡಿದ್ದಾರೆ.
ಡಿ.23 ರಂದು ಪ್ರಶಸ್ತಿ ಪ್ರದಾನ ಸಮಾರಂಭ ಸಿಟಿ ಬೀಚ್‌ನಲ್ಲಿ ಜರಗಿತು. ಮಾಜಿ ಸಚಿವ ಅಭಯಚಂದ್ರ ಜೈನ್, ಪಂಡಿತ್ ಹೆಲ್ತ್ ರೆಸಾಟ್ಸ್ ಆ್ಯಂಡ್ ಸ್ಪಾದ ಪ್ರಮೋಟರ್ ಎಲ್. ಗೋಯಲ್, ಸಿಐಎಸ್‌ಎಫ್ ಹಿರಿಯ ಅಧಿಕಾರಿ ಅಮಿತ್ ಕುಮಾರ್, ಮೂಡುಬಿದಿರೆ ರೋಟರ್ ಕ್ಲಬ್‌ನ ಅಧ್ಯಕ್ಷ ಡಾ. ರಮೇಶ್ ಉಪಸ್ಥಿತರಿದ್ದು ಲಿವಿಯಾ ಡಿ ಅಲ್ಮೇಡಾ ವಿವರಿಸಿದರು.
ಅಮಾಂಡಾ ಲಸ್ರಾದೊ, ತೇಜಸ್ವಿನಿ ಶೆಟ್ಟಿ, ಸ್ವಾತಿ ಎಸ್.ಕುಲಾಲ್, ಪ್ರಜ್ಞಾ ಉಪಸ್ಥಿತರಿದ್ದರು.