Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಮ್ಮ ಈ ಬ್ಯಾಂಕ್ ವಹಿವಾಟುಗಳಿಗೆ...

ನಿಮ್ಮ ಈ ಬ್ಯಾಂಕ್ ವಹಿವಾಟುಗಳಿಗೆ ಬೀಳುತ್ತೆ ಜಿಎಸ್ ಟಿ…

ಪ್ರತಿಯೊಬ್ಬ ಗ್ರಾಹಕ ತಿಳಿದಿರಲೇಬೇಕಾದ ಮಾಹಿತಿಯಿದು…

ವಾರ್ತಾಭಾರತಿವಾರ್ತಾಭಾರತಿ27 Dec 2018 6:00 PM IST
share
ನಿಮ್ಮ ಈ ಬ್ಯಾಂಕ್ ವಹಿವಾಟುಗಳಿಗೆ ಬೀಳುತ್ತೆ ಜಿಎಸ್ ಟಿ…

ನಾವು ನೀವೆಲ್ಲ ಬ್ಯಾಂಕ್ ವಹಿವಾಟುಗಳನ್ನು ನಡೆಸುತ್ತೇವೆ. ಆದರೆ ಕೆಲವು ವಹಿವಾಟುಗಳಿಗೆ ನಾವು ಜಿಎಸ್‌ಟಿಯನ್ನು ಪಾವತಿಸುತ್ತಿದ್ದೇವೆ ಎನ್ನುವುದು ನಮಗೆ ಗೊತ್ತಿಲ್ಲ. ಎಟಿಎಂ ಹಿಂದೆಗೆತಗಳು, ಚೆಕ್‌ ಪುಸ್ತಕ ವಿತರಣೆ,ಹೆಚ್ಚುವರಿ ಕ್ರೆಡಿಟ್ ಕಾರ್ಡ್‌ಗಳು ಅಥವಾ ಎಟಿಎಂ ಬಳಕೆಯಂತಹ ಉಚಿತ ಬ್ಯಾಂಕಿಂಗ್ ಸೇವೆಗಳ ಮೇಲೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಕೇಂದ್ರ ಪರೋಕ್ಷ ತೆರಿಗಗಳು ಮತ್ತು ಸೀಮಾಸುಂಕ ಮಂಡಳಿ(ಸಿಬಿಐಸಿ)ಯು ಈ ಹಿಂದೆ ಸ್ಪಷ್ಟಪಡಿಸಿತ್ತು. ಆದರೆ ಬ್ಯಾಂಕುಗಳು ಒದಗಿಸುವ ಹಲವು ಸೇವೆಗಳು ಉಚಿತವಾಗಿಯೇನೂ ದೊರೆಯುವುದಿಲ್ಲ, ಗ್ರಾಹಕರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶುಲ್ಕಗಳನ್ನು ಕಡಿಮೆ ಪ್ರಮಾಣದಲ್ಲಿ ನಿಗದಿಗೊಳಿಸಲಾಗಿದೆ. ಈ ಶುಲ್ಕಗಳ ಶೇಕಡಾವಾರು ಪ್ರಮಾಣ ಬ್ಯಾಂಕಿನಿಂದ ಬ್ಯಾಂಕಿಗೆ ಬೇರೆಬೇರೆಯಾಗಿವೆ. ಉದಾಹರಣೆಗೆ ಕ್ರೆಡಿಟ್ ಕಾರ್ಡ್‌ಗಳ ಬಾಕಿಯಿರುವ ಬಿಲ್‌ಗಳ ಮೇಲೆ ವಿಳಂಬ ಪಾವತಿ ಶುಲ್ಕಗಳು,ಚೆಕ್ ಅಮಾನ್ಯ ಶುಲ್ಕಗಳು,ಕಾರ್ಡ್‌ರಹಿತ ನಗದು ಹಿಂದೆಗೆತ,ನಗದು ಠೇವಣಿ ಮತ್ತು ನೆಫ್ಟ್, ಆರ್‌ಟಿಜಿಎಸ್‌ನಂತಹ ಹಣ ವರ್ಗಾವಣೆಗಳಂತಹ ವಹಿವಾಟುಗಳು ಜಿಎಸ್‌ಟಿಯನ್ನು ಆಕರ್ಷಿಸುತ್ತವೆ.

ಜಿಎಸ್‌ಟಿ ವಿಧಿಸಲಾಗುವ,ಆದರೆ ನಮಗೆ ಗೊತ್ತಿರದ ಐದು ಬ್ಯಾಂಕಿಂಗ್ ವಹಿವಾಟುಗಳು:

►ಕ್ರೆಡಿಟ್ ಕಾರ್ಡ್‌ಗಳ ಮೇಲೆ ವಿಳಂಬ ಪಾವತಿ ಶುಲ್ಕಗಳು

ಕ್ರೆಡಿಟ್ ಕಾರ್ಡ್‌ಗಳ ಮೇಲೆ ಬಾಕಿಯಿರುವ ಬಿಲ್‌ಗಳಿಗೆ ವಿಳಂಬ ಪಾವತಿ ಶುಲ್ಕವು ಜಿಎಸ್‌ಟಿ ವ್ಯಾಪ್ತಿಗೊಳಪಟ್ಟಿದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಬಿಲ್‌ಗಳ ಪಾವತಿಯನ್ನು ವಿಳಂಬಿಸಿದಾಗ ವಿಳಂಬ ಶುಲ್ಕದ ಜೊತೆಗೆ ಜಿಎಸ್‌ ಟಿಯನ್ನೂ ನಾವು ಬ್ಯಾಂಕುಗಳಿಗೆ ಪಾವತಿಸಬೇಕಾಗುತ್ತದೆ.

►ಸಾಲ ಮರುಪಾವತಿ ಸುಸ್ತಿಯಾದರೆ

 ಸಕಾಲದಲ್ಲಿ ಸಾಲವನ್ನು ಮರುಪಾವತಿಸದಿದ್ದರೆ ತೆರಬೇಕಾದ ಹೆಚ್ಚುವರಿ ಬಡ್ಡಿಯ ಹೊರೆ ಈಗ ಹೆಚ್ಚಿದೆ. ಏಕೆಂದರೆ ಇಂತಹ ವಿಳಂಬಿತ ಸಾಲ ಮರುಪಾವತಿಗೆ ಬ್ಯಾಂಕುಗಳು ಹೇರುವ ಹೆಚ್ಚುವರಿ ಬಡ್ಡಿಯ ಮೇಲೆ ಈಗ ಜಿಎಸ್‌ಟಿಯನ್ನೂ ಪಾವತಿಸಬೇಕಾಗುತ್ತದೆ.

►ಚೆಕ್ ಅಮಾನ್ಯ ಶುಲ್ಕಗಳು

ಬ್ಯಾಂಕ್ ಗ್ರಾಹಕರು ಇನ್ನೊಬ್ಬರಿಗೆ ನೀಡಿದ ಚೆಕ್ ಖಾತೆಯಲ್ಲಿ ನಗದು ಹಣವಿಲ್ಲದೆ ಅಮಾನ್ಯಗೊಂಡರೆ ಅಂತಹ ಗ್ರಾಹಕರು ಅದಕ್ಕಾಗಿ ಬ್ಯಾಂಕುಗಳು ವಿಧಿಸುವ ಶುಲ್ಕದ ಮೇಲೆ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ಜಿಎಸ್‌ಟಿಯಿಂದ ತಪ್ಪಿಸಿಕೊಳ್ಳಲು ಬಯಸಿದ್ದರೆ ನೀವು ನೀಡಿದ ಚೆಕ್ ಅಮಾನ್ಯಗೊಳ್ಳದಂತೆ ನೋಡಿಕೊಳ್ಳಿ.

►ಎಟಿಎಂಗಳಲ್ಲಿ ಕಾರ್ಡ್‌ರಹಿತ ಹಿಂದೆಗೆತಗಳು ಮತ್ತು ನಗದು ಠೇವಣಿಗಳು

ನೀವು ಎಟಿಎಂಗಳಲ್ಲಿ ಕಾರ್ಡ್‌ರಹಿತವಾಗಿ ಹಣವನ್ನು ಹಿಂದೆಗೆದುಕೊಂಡರೆ ಬ್ಯಾಂಕು ಅದಕ್ಕಾಗಿ ಶುಲ್ಕವನ್ನು ವಿಧಿಸುತ್ತದೆ ಮತ್ತು ನೀವು ಇದರ ಮೇಲೆ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಉದಾಹರಣೆಗೆ ಇಂತಹ ವಹಿವಾಟಿಗೆ ಎಸ್‌ಬಿಐ 22 ರೂ. ಶುಲ್ಕ ಮತ್ತು ಜಿಎಸ್‌ಟಿಯನ್ನು ನಿಮ್ಮ ಖಾತೆಗೆ ಖರ್ಚು ಹಾಕುತ್ತದೆ. ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ವ್ಯವಹಾರವು ನಿರಾಕರಿಸಲ್ಪಟ್ಟರೂ ನಿಮ್ಮ ಖಾತೆಯಿಂದ ಶುಲ್ಕ ಮತ್ತು ಜಿಎಸ್‌ಟಿ ಕಡಿತವಾಗುತ್ತವೆ. ಅಲ್ಲದೆ ಮಾಸಿಕ ಮೂರು ಉಚಿತ ನಗದು ಠೇವಣಿಗಳ ಮಿತಿಯನ್ನು ಮೀರಿದರೆ ಅಂತಹ ಪ್ರತಿ ವಹಿವಾಟಿಗೆ 50 ರೂ.ಶುಲ್ಕ ಮತ್ತು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ.

►ಎನ್ನಾರೈಗಳಿಗೆ ವಿತರಣೆಯಾದ ಜೀವವಿಮೆ ಪಾಲಿಸಿಗಳು

ಅನಿವಾಸಿ ಭಾರತೀಯರಿಗೆ ನೀಡಲಾದ ಜೀವವಿಮೆ ಪಾಲಿಸಿಗಳು ಜಿಎಸ್‌ಟಿಯನ್ನು ಆಕರ್ಷಿಸುತ್ತವೆ. ಪ್ರೀಮಿಯಂ ಹಣವನ್ನು ನಾನ್-ರೆಸಿಡೆಂಟ್ ಎಕ್ಸ್‌ಟರ್ನಲ್ ಅಕೌಂಟ್‌ನ ಮೂಲಕ ಸ್ವೀಕರಿಸಲಾಗುವುದರಿಂದ ಮತ್ತು ಪಾವತಿಯನ್ನು ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುವುದರಿಂದ ಇದಕ್ಕೆ ತೆರಿಗೆಯನ್ನು ವಿಧಿಸಲಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X