ಪ್ರೊ.ಕೆ.ಎಸ್ ಭಗವಾನ್ ವಿರುದ್ಧ ಮಡಿಕೇರಿಯಲ್ಲಿ ದೂರು ದಾಖಲು

ಮಡಿಕೇರಿ, ಡಿ.27: ವಿವಾದಾತ್ಮಕ ಪುಸ್ತಕ ಬರೆದಿದ್ದಾರೆಂದು ಆರೋಪಿಸಿ ವಿಚಾರವಾದಿ ಪ್ರೊ. ಭಗವಾನ್ ವಿರುದ್ಧ ಮಡಿಕೇರಿ ವಕೀಲ ಕೃಷ್ಣಮೂರ್ತಿ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಮ ಮಂದಿರ ಏಕೆ ಬೇಡ?ಎಂಬ ಪುಸ್ತಕದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತರುವಂತಹ ಅಂಶಗಳಿವೆ ಎಂದು ಆರೋಪಿಸಿರುವ ಅವರು ಭಗವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಶ್ರೀರಾಮನ ಕುರಿತು ಅವಹೇಳನ ಮಾಡಿರುವುದಲ್ಲದೆ ಮಹಾತ್ಮ ಗಾಂಧಿ ಬಗ್ಗೆಯೂ ಅಗೌರವ ತೋರಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.
Next Story





