ಕರಾವಳಿ ಯುವ ಉತ್ಸವಕ್ಕೆ ಚಾಲನೆ

ಮಂಗಳೂರು, ಡಿ.27: ಇಂದಿನಿಂದ ಎರಡು ದಿನಗಳ ನಡೆಯಲಿರುವ ಕರಾವಳಿ ಯುವ ಉತ್ಸವಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ನಗರದ ಕದ್ರಿ ಉದ್ಯಾನವನದ ತೆರೆದ ರಂಗಮಂದಿರದಲ್ಲಿಂದು ಚಾಲನೆ ನೀಡಿ, ಶುಭ ಹಾರೈಸಿದರು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಭಾಗವಹಿಸಿ ಶುಭ ಹಾರೈಸಿದರು.ಮಿಸೆಸ್ ಮಂಗಳೂರು ಸುಧೀಕ್ಷಾ ಕಿರಣ್ ಸುವರ್ಣ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಮನಪಾ ಸದಸ್ಯೆ ರೂಪಾ ಡಿ.ಬಂಗೇರಾ, ವಿದುಷಿ ವಿದ್ಯಾಶ್ರಿ ರಾಧಾಕೃಷ್ಣ, ನಾಟ್ಯಗುರು ಪ್ರಮೋದ್ ಉಳ್ಳಾಲ್, ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಶ್ರೀಧರ ಮಣಿಯಾಣಿ, ಬಿಇಒ ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ಸಿ.ದಯಾನಂದ ಪೈ-ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ವಂದಿಸಿದರು. ಕರಾವಳಿ ಯುವ ಉತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ 30 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
Next Story