ಲಂಚದ ಆಮಿಷ: ಅಧಿಕಾರಿ ಎಸಿಬಿ ಬಲೆಗೆ
ಬೆಂಗಳೂರು, ಡಿ.27: ಅಪಾರ್ಟ್‌ಮೆಂಟ್‌ವೊಂದನ್ನು ರಿಜಿಸ್ಟರ್ ಮಾಡಿಕೊಳ್ಳಲು ಲಂಚದ ಆಮಿಷವೊಡ್ಡಿದ ಅಧಿಕಾರಿಯನ್ನು ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಕಚೇರಿಯಲ್ಲಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ಬೆಂಗಳೂರು ನಗರ ನಿವಾಸಿ ಪೂರ್ವ ತಾಲೂಕು, ಕುಂದರಹಳ್ಳಿ ಗೇಟ್‌ನ ತೂಬರಹಳ್ಳಿಯ ಸರಣ್ಯ ಗ್ರೂಪ್ ರವರಿಂದ ನಿರ್ಮಾಣಗೊಂಡಿರುವ ಸರಣ್ಯ ಸೋಹನ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಒಂದನ್ನು ಕಿರಣ್ ಎಂಬುವವರು ಖರೀದಿಸಿದ್ದರು. ಅದನ್ನು ರಿಜಿಸ್ಟರ್ ಮಾಡಿಸಲು ಬಿದರಹಳ್ಳಿ ಸಬ್-ರಿಜಿಸ್ಟ್ರಾರ್ 27 ಸಾವಿರ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಈ ಸಂದರ್ಭದಲ್ಲಿ ಇವರು ನೀಡಿದ ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಲಂಚದ ಹಣವನ್ನು ವಶಪಡಿಸಿಕೊಂಡು ದೂರು ದಾಖಲಿಸಿಕೊಳ್ಳಲಾಗಿದೆ.
Next Story





