ಬುಲಂದ್ ಶಹರ್ ಹಿಂಸಾಚಾರ: ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿದ ಆರೋಪಿಯ ಬಂಧನ
![ಬುಲಂದ್ ಶಹರ್ ಹಿಂಸಾಚಾರ: ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿದ ಆರೋಪಿಯ ಬಂಧನ ಬುಲಂದ್ ಶಹರ್ ಹಿಂಸಾಚಾರ: ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿದ ಆರೋಪಿಯ ಬಂಧನ](https://www.varthabharati.in/sites/default/files/images/articles/2018/12/27/169993.jpg)
ಲಕ್ನೋ, ಡಿ.27: ಇತ್ತೀಚೆಗೆ ಬುಲಂದ್ ಶಹರ್ ನಲ್ಲಿ ನಡೆದ ಹಿಂಸಾಚಾರದ ಸಂದರ್ಭ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿಯನ್ನು ಬಂಧಿಸಲಾಗಿದೆ ಎಂದು ವಿಶೇಷ ತನಿಖಾ ತಂಡ (ಎಸ್ ಐಟಿ) ಬಂಧಿಸಿದೆ.
ಸುಬೋಧ್ ಕುಮಾರ್ ಸಿಂಗ್ ರಿಗೆ ಗುಂಡಿಕ್ಕಿದ್ದಾಗಿ ಟ್ಯಾಕ್ಸಿ ಚಾಲಕ ಪ್ರಶಾಂತ್ ನಟ್ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಬಜರಂಗದಳ ನಾಯಕ ಯೋಗೇಶ್ ರಾಜ್, ಶಿಖರ್ ಅಗರ್ವಾಲ್ ಮತ್ತು ವಿಹಿಂಪ ಕಾರ್ಯಕರ್ತ ಉಪೇಂದ್ರ ರಾಘವ್ ತಲೆಮರೆಸಿಕೊಂಡಿದ್ದಾರೆ.
Next Story