ಮಲ್ಯ ವಿರುದ್ಧ ಇಡಿ ಮನವಿ: ಜನವರಿ 5ರಂದು ತೀರ್ಪು
ಮುಂಬೈ, ಡಿ. 27: ಮದ್ಯದ ಉದ್ಯಮ ವಿಜಯ್ ಮಲ್ಯ ಅವರನ್ನು ‘ದೇಶ ತೊರೆದ ಆರ್ಥಿಕ ಅಪರಾಧಿ’ ಎಂದು ಘೋಷಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಬುಧವಾರ 2019 ಜನವರಿ 5ಕ್ಕೆ ಮುಂದೂಡಿದೆ.
ಮಲ್ಯ ಅವರ 12,500 ಕೋ. ರೂ. ಮೌಲ್ಯದ ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗಲು ಹಾಗೂ ಅವರನ್ನು ಇಂಗ್ಲೆಂಡ್‌ನಿಂದ ಗಡಿಪಾರು ಮಾಡುವ ಪ್ರಕ್ರಿಯಯನ್ನು ತ್ವರಿತಗೊಳಿಸಲು ಹಣ ವಂಚನೆ ಕಾಯ್ದೆ ಅಡಿಯಲ್ಲಿ ಮಲ್ಯ ಅವರನ್ನು ‘ದೇಶ ತೊರೆದ ಆರ್ಥಿಕ ಅಪರಾಧಿ’ ಎಂದು ಘೋಷಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು. ಜಾರಿ ನಿರ್ದೇಶನಾಲಯದ ವಾದ ಹಾಗೂ ಮಲ್ಯ ವಕೀಲರ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಅಂತಿಮ ತೀರ್ಪನ್ನು ಬುಧವಾರಕ್ಕೆ ನಿಗದಿಪಡಿಸಿತ್ತು. ಅದರೆ, ಬುಧವಾರ ಜನವರಿ 5ಕ್ಕೆ ಮುಂದೂಡಿದೆ.
Next Story