ಸಿರಿಯದ ಮೇಲೆ ವಾಯು ದಾಳಿ: ಖಚಿತಪಡಿಸಿದ ಇಸ್ರೇಲ್

ಜೆರುಸಲೇಮ್, ಡಿ. 27: ಸಿರಿಯದಲ್ಲಿ ಮಂಗಳವಾರ ರಾತ್ರಿ ನಡೆದ ವಾಯುದಾಳಿಯನ್ನು ನಡೆಸಿರುವುದು ಇಸ್ರೇಲ್ ಎಂಬುದಾಗಿ ಆ ದೇಶದ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಿಝ್ಬುಲ್ಲಾ ಭಯೋತ್ಪಾದಕ ಗುಂಪಿಗೆ ಇರಾನ್ ಶಸ್ತ್ರಾಸ್ತ್ರಗಳ ಹಸ್ತಾಂತರದ ವೇಳೆ ಹಲವು ಗುರಿಗಳ ಮೇಲೆ ದಾಳಿ ನಡೆಸಲಾಯಿತು ಎಂದು ಅವರು ತಿಳಿಸಿದರು.
ಈ ವಾಯುದಾಳಿಯನ್ನು ರಶ್ಯ ಟೀಕಿಸಿದೆ. ಅದು ನಾಗರಿಕ ವಿಮಾನಗಳಿಗೆ ಬೆದರಿಕೆಯೊಡ್ಡಿದೆ ಎಂದು ಅದು ಹೇಳಿದೆ.
ಮಂಗಳವಾರ ತಡರಾತ್ರಿ ಮತ್ತು ಬುಧವಾರ ಮುಂಜಾನೆ ಮೂರು ಪ್ರಮುಖ ಸ್ಥಳಗಳಲ್ಲಿರುವ ಹಲವಾರು ಇರಾನ್ ಗುರಿಗಳ ಮೇಲೆ ಇಸ್ರೇಲ್ ವಾಯುಪಡೆ ದಾಳಿ ನಡೆಸಿತು ಎಂದು ಇಸ್ರೇಲ್ ಅಧಿಕಾರಿ ಹೇಳಿದರು.
Next Story





