ಸಿಪಿಇಸಿ: ಪಾಕ್ನಿಂದ ಚೀನಾಕ್ಕೆ 2.81 ಲಕ್ಷ ಕೋಟಿ ರೂ. ಪಾವತಿ
ಇಸ್ಲಾಮಾಬಾದ್, ಡಿ. 27: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ನಲ್ಲಿ ಚೀನಾ ಹೂಡಿಕೆ ಮಾಡಿರುವ 26.5 ಬಿಲಿಯ ಡಾಲರ್ (ಸುಮಾರು 1.86 ಲಕ್ಷ ಕೋಟಿ ರೂಪಾಯಿ) ಮೊತ್ತಕ್ಕೆ ಪಾಕಿಸ್ತಾನವು ಸಾಲ ಮತ್ತು ಡಿವಿಡೆಂಡ್ ರೂಪದಲ್ಲಿ 20 ವರ್ಷಗಳಲ್ಲಿ 40 ಬಿಲಿಯ ಡಾಲರ್ (ಸುಮಾರು 2.81 ಲಕ್ಷ ಕೋಟಿ ರೂಪಾಯಿ) ಮರುಪಾವತಿಸಲಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಸಿಪಿಇಸಿಯಲ್ಲಿ ಚೀನಾದ ಹೂಡಿಕೆ 50 ಬಿಲಿಯ ಡಾಲರ್ ಆಗಿರಬಹುದೆಂದು ಈ ಮೊದಲು ಭಾವಿಸಲಾಗಿತ್ತು. ಆದರೆ, ‘ಎಕ್ಸ್ಪ್ರೆಸ್ ಟ್ರಿಬ್ಯೂನ್’ನಲ್ಲಿ ಬುಧವಾರ ಪ್ರಕಟಗೊಂಡ ವರದಿಯೊಂದು, ಅದಕ್ಕಿಂತ ಸುಮಾರು ಅರ್ಧದಷ್ಟು ಹೂಡಿಕೆಯನ್ನು ಚೀನಾ ಮಾಡಿದೆ ಎಂಬ ಇಂಗಿತವನ್ನು ವ್ಯಕ್ತಪಡಿಸಿದೆ.
Next Story