ಪಾಕ್: ಝರ್ದಾರಿ ವಿದೇಶ ಪ್ರಯಾಣಕ್ಕೆ ನಿಷೇಧ

ಇಸ್ಲಾಮಾಬಾದ್, ಡಿ. 27: ಕಪ್ಪು ಹಣ ಬಿಳುಪು ಮಾಡುತ್ತಿರುವ ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿ ವಿದೇಶಕ್ಕೆ ಪ್ರಯಾಣಿಸುವುದನ್ನು ನಿಷೇಧಿಸುವುದಾಗಿ ಪಾಕಿಸ್ತಾನ ಗುರುವಾರ ತಿಳಿಸಿದೆ.
ಕಪ್ಪುಹಣ ಬಿಳುಪು ಮಾಡುವ ಹಾಗೂ ನಕಲಿ ಬ್ಯಾಂಕ್ ಖಾತೆಗಳನ್ನು ಬಳಸುವ 172 ಮಂದಿಯ ಪಟ್ಟಿಯಲ್ಲಿ ಝರ್ದಾರಿ ಮತ್ತು ಅವರ ಸಹೋದರಿ ಫರ್ಯಾಲ್ ತಲ್ಪುರ್ ಹೆಸರುಗಳೂ ಇವೆ ಎಂದು ವಾರ್ತಾ ಸಚಿವ ಫಾವದ್ ಚೌಧರಿ ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘‘ಎಲ್ಲ 172 ಹೆಸರುಗಳನ್ನು ವಿದೇಶ ಪ್ರಯಾಣ ನಿರ್ಬಂಧ ಪಟ್ಟಿಗೆ ಸೇರಿಸಲಾಗುವುದು’’ ಎಂದು ಅವರು ನುಡಿದರು.
Next Story





