Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇದು 30 ವರ್ಷಕ್ಕೇ 35 ಸಂಶೋಧನೆಗಳ...

ಇದು 30 ವರ್ಷಕ್ಕೇ 35 ಸಂಶೋಧನೆಗಳ ಕೀರ್ತಿಯ ಝೀಶಾನ್ ಮಿರ್ಝಾ ಕತೆ

►3 ವರ್ಷದ ಡಿಗ್ರಿಗೆ 5 ವರ್ಷ ಬೇಕಾಯಿತು ►ಸ್ನಾತಕೋತ್ತರ ಪದವಿ ಅರ್ಧದಲ್ಲೇ ಬಿಟ್ಟಾಯ್ತು

ಸಂಧ್ಯಾ ರಮೇಶ್ಸಂಧ್ಯಾ ರಮೇಶ್28 Dec 2018 2:18 PM IST
share
ಇದು 30 ವರ್ಷಕ್ಕೇ 35 ಸಂಶೋಧನೆಗಳ ಕೀರ್ತಿಯ ಝೀಶಾನ್ ಮಿರ್ಝಾ ಕತೆ

ತನ್ನ ಹೊಸ ಸಂಶೋಧನೆಗೆ ಮೋದಿ ಸರ್ಕಾರದ ವೈಜ್ಞಾನಿಕ ಸಲಹೆಗಾರನ ಹೆಸರಿಟ್ಟ ಯುವ ಸಾಧಕ

ಝೀಶನ್ ಮಿರ್ಝಾ (30) ತಮ್ಮ ಶೈಕ್ಷಣಿಕ ಸಾಧನೆಯಲ್ಲಿ ಹಲವು ಅಡ್ಡಿ ಆತಂಕಗಳನ್ನು ಎದುರಿಸಿದ್ದಾಗಿ ಘಂಟಾಘೋಷವಾಗಿ ಹೇಳುತ್ತಾರೆ. ಮೂರು ವರ್ಷದ ಪದವಿ ಕೋರ್ಸ್ ಪೂರ್ಣಗೊಳಿಸಲು ಅವರಿಗೆ ಐದು ವರ್ಷ ಬೇಕಾಯಿತು. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಜೀವವಿಜ್ಞಾನ ಸಂಸ್ಥೆ (ಎನ್‍ಸಿಬಿಎಸ್)ಯಲ್ಲಿ ಸಂರಕ್ಷಣಾ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಗೆ ನೋಂದಾಯಿಸಿಕೊಂಡ ಬಳಿಕ ಕಳಪೆ ಸಾಧನೆಗಾಗಿ ಅರ್ಧದಿಂದಲೇ ಕೋರ್ಸ್ ಬಿಟ್ಟುಬಿಟ್ಟರು.

ಎನ್‍ಸಿಬಿಎಸ್‍ನ ಸಂಶೋಧನಾ ಸಹಾಯಕ ಹಾಗೂ ಸಂದರ್ಶಕ ವಿದ್ಯಾರ್ಥಿಯಾದ ಈ ಅಪೂರ್ವ ಸಾಧಕನ ವ್ಯಕ್ತಿಚಿತ್ರದಲ್ಲಿ ಇದು ಹಳಿತಪ್ಪಿದ ಸಣ್ಣ ಘಟ್ಟವಾಗಿ ಕಾಣುತ್ತದೆ. ಮಿರ್ಝಾ ಇತ್ತೀಚೆಗೆ ತಾವು ಇದುವರೆಗೆ ಭಾರತದಲ್ಲಿ ಸಂಶೋಧಿಸಿದ 35 ಹೊಸ ಜೀವಿ ಪ್ರಬೇಧಗಳ ಪಟ್ಟಿಗೆ ಮತ್ತೊಂದನ್ನು ಸೇರಿಸಿದ್ದಾರೆ ಹಾಗೂ 70ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಎರಡು ಬಾರಿ ಸ್ಯಾಂಚುರಿ ಏಷ್ಯಾದ ಯಂಗ್ ನ್ಯಾಚುರಲಿಸ್ಟ್ ಪ್ರಶಸ್ತಿ ಸೇರಿದಂತೆ ಸಂರಕ್ಷಣೆ ಮತ್ತು ಜೀವಶಾಸ್ತ್ರದಲ್ಲಿ ಹಲವು ಪ್ರಶಸ್ತಿಗಳಿಗೂ ಇವರು ಭಾಜನರಾಗಿದ್ದಾರೆ.

ಇತ್ತೀಚೆಗೆ ತಾವು ಸಂಶೋಧಿಸಿದ ಹೊಸ ಮೈದಾನವಾಸಿ ಹಲ್ಲಿ ಜೀವಿ ಪ್ರಬೇಧಕ್ಕೆ ಮೋದಿ ಸರ್ಕಾರದ ವೈಜ್ಞಾನಿಕ ಸಲಹೆಗಾರ ಕೆ.ವಿಜಯರಾಘವನ್ ಅವರ ಗೌರವಾರ್ಥ ಹೆಮಿಡಾಕ್ಟಿಲಸ್ ವಿಜಯರಾಘವಾನಿ ಎಂಬ ಹೆಸರಿಟ್ಟಿದ್ದಾರೆ. ಈ ಯುವ ಸಂಶೋಧಕ ಇದನ್ನು ಉತ್ತರ ಕರ್ನಾಟಕದಲ್ಲಿ ಪತ್ತೆ ಮಾಡಿದ್ದಾರೆ.

ಇವರ ಸಂಶೋಧನಾ ಪ್ರಬಂಧವನ್ನು ಸರೀಸೃಪಶಾಸ್ತ್ರದ ನಿಯತಕಾಲಿಕ ಫಿಲೊಮೆಡುಸಾದಲ್ಲಿ ಪ್ರಕಟಿಸಲಾಗಿದೆ.

ಸ್ನಾತಕೋತ್ತರ ಪದವಿಯನ್ನೂ ಪಡೆಯದ ತಮಗೆ ಸಂಶೋಧನೆಗಾಗಿ ಎನ್‍ಸಿಬಿಎಸ್ ಪ್ರಯೋಗಾಲಯದಲ್ಲಿ ಅವಕಾಶ ಮಾಡಿಕೊಟ್ಟ ವಿಜಯರಾಘವನ್ ಅವರ ಗೌರವಾರ್ಥವಾಗಿ ತಾವು ಪತ್ತೆ ಮಾಡಿರುವ ಹೊಸ ಹಲ್ಲಿ ಪ್ರಬೇಧಕ್ಕೆ ಅವರ ಹೆಸರನ್ನೇ ಇಟ್ಟಿರುವುದಾಗಿ ಅತ್ಯಪಾಯಕಾರಿ ಪ್ರಾಣಿಗಳ ತಜ್ಞರಾಗಿರುವ ಮಿರ್ಝಾ ಹೇಳುತ್ತಾರೆ.

"ನನಗೆ ಮಾತ್ರವಲ್ಲ; ಹಲವರಿಗೆ ಅವರು ನೆರವು ನೀಡಿದ್ದಾರೆ. ವಿಜ್ಞಾನ ಹಾಗೂ ವೈಜ್ಞಾನಿಕ ಸಂವಹನಕ್ಕೆ ಅವರು ಸದಾ ಉತ್ತೇಜನ ನೀಡುತ್ತಾರೆ. ಸರ್ಕಾರದಲ್ಲಿ ಇರುವ ಇಂಥ ಅತ್ಯುನ್ನತ ವ್ಯಕ್ತಿಗಳು ದೇಶದಲ್ಲಿ ವಿಜ್ಞಾನದ ಬಗ್ಗೆ ಧೀರ್ಘಾವಧಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತಾರೆ ಎನ್ನುವುದು ಅತ್ಯಂತ ಸಂತಸದ ವಿಚಾರ"

ವಿಜಯರಾಘವನ್ ಕೂಡಾ ಮಿರ್ಝಾ ಸಾಧನೆಯನ್ನು ಅಭಿನಂದಿಸುತ್ತಾರೆ. "ಅವರೊಬ್ಬ ಶ್ರೇಷ್ಠ ವಿಜ್ಞಾನಿ. ನಿಜಕ್ಕೂ ಅದ್ಭುತ ಯುವಕ; ನನಗೆ ಹಾಗೂ ಇತರರಿಗೆ ಸದಾ ಸ್ಫೂರ್ತಿ" ಎಂದು ವಿಜಯರಾಘವನ್ ಈ ಸಾಧಕನ ಗುಣಗಾನ ಮಾಡುತ್ತಾರೆ.

"ಹೆಮಿಡಿಡಕ್ಟಿಲಸ್‍ನಿಂದಾಗಿ ನನಗೆ ತೀರಾ ಮುಜುಗರವಾಗಿದೆ. ಹೀಗೆ ಮಾಡಿದ್ದಕ್ಕೆ ನಾನು ಆತನ ತಲೆ ಮೇಲೆ ಮೆದುವಾಗಿ ತಟ್ಟಿದ್ದೇನೆ. ಪ್ರಸ್ತುತ ನಾನು ಉಷ್ಟ್ರಪಕ್ಷಿಯ ಸೋಗುಹಾಕಿಕೊಂಡಿದ್ದೇನೆ"

ವನ್ಯಜಗತ್ತಿಗೆ ಪದಾರ್ಪಣೆ

ಮಿರ್ಝಾ, ಸಂಜಯ್‍ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರ ಇರುವ ಮುಂಬೈನ ಅಂಧೇರಿಯಲ್ಲಿ ಬೆಳೆದವರು. ಪ್ರಾಣಿಶಾಸ್ತ್ರ ಮತ್ತು ಪ್ರಾಣಿಗಳಲ್ಲಿ ಆಸಕ್ತಿ ಹುಟ್ಟಿಸಲು ಮತ್ತು ಅದನ್ನು ಪೋಷಿಸಲು ಈ ಉದ್ಯಾನವನ ಪ್ರೇರಕ ಶಕ್ತಿ ಎಂದು ಅವರು ಹೇಳುತ್ತಾರೆ.

"ನನ್ನ ಮನೆಯ ಸುತ್ತ ಇರುವ ಪ್ರಾಕೃತಿಕ ಮುಳ್ಳುಗಂಟಿಗಳಲ್ಲಿ ನಾನು ಮಗುವಾಗಿದ್ದಾಗಲೇ ಹಾವುಗಳನ್ನು ನಿಯತವಾಗಿ ನೋಡುತ್ತಿದ್ದೆ. ಅವುಗಳ ಬಗ್ಗೆ ಭಯದಿಂದ ಕಲ್ಲಾಗುತ್ತಿದ್ದೆ"

ಆದರೆ ಅದು ಐದನೇ ತರಗತಿವರೆಗೆ ಮಾತ್ರ. ಎಲ್ಲರೂ ಹೆದರುವ ಕಾರಣಕ್ಕೆ ತಾನೂ ಹೆದರುತ್ತಿದ್ದೇನೆ ಎನ್ನುವುದು ಅವರಿಗೆ ದಿಢೀರನೇ ಮನವರಿಕೆಯಾಯಿತು. ಮಿರ್ಝಾ ಎಂಟನೇ ತರಗತಿಯಲ್ಲಿದ್ದಾಗ, ಶಾಲೆಯ ಪರಿಸರ ಕ್ಲಬ್ ಸೇರಿಕೊಂಡರು. ಪಕ್ಕದ ಕಾಡಿಗೆ ಪ್ರವಾಸ ಹೋಗುವ ಮುನ್ನ ವಲ್ಡ್‍ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್)ನ ಕರಪತ್ರವನ್ನು ಪಡೆದದ್ದನ್ನು ನೆನಪಿಸಿಕೊಳ್ಳುತ್ತಾರೆ.

"ಒಂದು ಕರಪತ್ರದಲ್ಲಿ ರಸೆಲ್ಸ್ ವೈಪರ್ ಬಗ್ಗೆ ಮಾಹಿತಿ ಇತ್ತು ಹಾಗೂ ಅದನ್ನು ನಾನು ಕೊಳ್ಳೆ ಹೊಡೆದಿದ್ದೆ" ಎಂದು ಹೇಳುತ್ತಾರೆ. "ಭಾರತೀಯ ಹಾವುಗಳ ಬಗ್ಗೆ ನನಗೆ ಮಾಹಿತಿ ಸಿಗುತ್ತಿದ್ದುದು ವಿರಳ. ಆಗ ಇವುಗಳನ್ನು ಪತ್ತೆ ಮಾಡಿ ಅರ್ಥ ಮಾಡಿಕೊಳ್ಳಬೇಕು ಎಂದು ಮನವರಿಕೆಯಾಯಿತು"

ಇದು ಮಿರ್ಝಾಗೆ ಹಾವುಗಳ ಹುಚ್ಚು ಹಿಡಿಸಿತು. ಇಂಟರ್‍ನೆಟ್‍ನಲ್ಲಿ ಮಾಹಿತಿಗಾಗಿ ಜಾಲಾಡಿದರು. ತಮ್ಮ ಸುತ್ತ ಮುತ್ತಲ ಪ್ರದೇಶಗಳಲ್ಲಿ ಹೊರಕ್ಕೆ ಹೋಗಿ ಅವುಗಳನ್ನು ಗುರುತಿಸುವ ಪ್ರಯತ್ನ ಮಾಡಿದರು. ಅವುಗಳ ಬಗ್ಗೆ ಏನೆಲ್ಲ ಮಾಹಿತಿ ಲಭ್ಯವಾಗುತ್ತದೆಯೋ ಅವೆಲ್ಲವನ್ನೂ ಓದಿದರು. ತೀರಾ ಬೇಗನೆ ಅಂದರೆ ಶಾಲಾ ದಿನಗಳಲ್ಲೇ ಮಿರ್ಝಾ ಸ್ಥಳೀಯವಾಗಿ ಹಾವಿನ ತಜ್ಞರಾದರು.

ಭಾವನ್ಸ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಓದುತ್ತಿದ್ದಾಗ ನಿಯತವಾಗಿ ಮುಂಬೈನಿಂದ ಹೊರಗೆ ಪ್ರವಾಸ ಕೈಗೊಂಡು, ಹಾವುಗಳ ಸಂಖ್ಯೆ ಅಧಿಕವಾಗಿರುವ ಕಡೆಗಳಲ್ಲಿ ಸಂಚರಿಸುತ್ತಿದ್ದರು ಹಾಗೂ ಅಪಾಯಕಾರಿ ಹಾವುಗಳ ಪ್ರಭೇಧವನ್ನು ಗುರುತಿಸುವುದು ಹೇಗೆ ಎಂಬ ಬಗ್ಗೆ ಸ್ಥಳೀಯರಿಗೆ ತಿಳಿವಳಿಕೆ ನೀಡುತ್ತಿದ್ದರು.

ಈ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ಅವರಿಗೆ ಇತರ ಅಪಾಯಕಾರಿ ಸರೀಸೃಪಗಳು ಒಂದೊಂದಾಗಿ ಕಂಡುಬಂದವು. ಇವುಗಳ ದಾಖಲೀಕರಣವನ್ನು ಕೂಡಾ ಮಾಡಿದರು. ತೀರಾ ಮೊದಲೇ ಇವರು ಮಹಾರಾಷ್ಟ್ರ ಪ್ರದೇಶದ ಜೀವವೈವಿಧ್ಯದ ಬಗ್ಗೆ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದರು.

"ಅದು ನನ್ನ ಆರಂಭ. ಅಲ್ಲಿಂದ ನಾನು ಎಲ್ಲೂ ನಿಲ್ಲಲೇ ಇಲ್ಲ" ಎಂದು ಮಿರ್ಝಾ ಹೇಳುತ್ತಾರೆ.

ಶಿಕ್ಷಣ ಮತ್ತು ಎನ್‍ಸಿಬಿಎಸ್

ಮಿರ್ಝಾಗೆ ಶೈಕ್ಷಣಿಕ ವರ್ಷಗಳು ಒಳ್ಳೆಯ ದಿನಗಳೇನೂ ಆಗಿರಲಿಲ್ಲ. ಅವರ ಕಾಲೇಜು ಪ್ರಾಧ್ಯಾಪಕರೊಬ್ಬರು, "ಮಿರ್ಝಾ ತರಗತಿಯಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚು ಪತ್ರಿಕೆಗಳಲ್ಲಿ ಕಾಣಸಿಗುತ್ತಾರೆ" ಎಂದು ತಮಾಷೆ ಮಾಡುತ್ತಿದ್ದಂತೆ. ಇದೀಗ ಮಿರ್ಝಾ ಮುಂಬೈ ವಿಶ್ವವಿದ್ಯಾನಿಲಯದಿಂದ "ಮಾಸ್ಟರ್ಸ್ ಬೈ ರೀಸರ್ಚ್" ಪದವಿ ಪಡೆಯುವ ಪ್ರಯತ್ನದಲ್ಲಿದ್ದಾರೆ. ಮುಂಬೈ ವಿವಿ ಮಾತ್ರ ಈ ಪದವಿ ನೀಡುತ್ತದೆ.

ಕಾಲೇಜು ಶಿಕ್ಷಣ ವ್ಯವಸ್ಥೆಯ ಸಂರಚನೆಯನ್ನು ತಾವು ಇಷ್ಟಪಡುವುದಿಲ್ಲ ಎಂದು ಮಿರ್ಝಾ ಸ್ಪಷ್ಟವಾಗಿ ಹೇಳುತ್ತಾರೆ.  ಪದವಿ ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ಇದು ಹೇಗೆ ಅನುಕೂಲಕರವಲ್ಲ ಎನ್ನುವುದನ್ನು ಅವರು ವಿವರಿಸುತ್ತಾರೆ. "ನಾನು ಪ್ರತಿಯೊಂದನ್ನೂ ಸ್ವಂತವಾಗಿ ಕಲಿತೆ. ಬಹುತೇಕ ಯಾವ ಸಹಾಯವೂ ಇಲ್ಲದೇ ಕಲಿತೆ. ಇದನ್ನು ಮುಂದುವರಿಸುವಲ್ಲಿ ನನಗೆ ಅತೀವ ಆಸಕ್ತಿ. ಆದ್ದರಿಂದ ನಾನು ವಿಜಯರಾಘವನ್ ಅವರನ್ನು ಸಂಪರ್ಕಿಸಿ, ಈ ಬಗ್ಗೆ ಸಂಶೋಧನೆಗೆ ಪ್ರಯೋಗಾಲಯ ಬಳಸಿಕೊಳ್ಳಲು ಕೋರಿದೆ. ಅವರು ತಕ್ಷಣ ಸಂಶೋಧನೆಗಾಗಿ ಪ್ರಯೋಗಾಲಯ ಮಂಜೂರು ಮಾಡಿದರು"

"ನಾನು ಝೀಶಾನ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನುಸರಿಸಿ, ನೈಸರ್ಗಿಕ ಇತಿಹಾಸದ ಹಲವು ಅಂಶಗಳನ್ನು ಅವರಿಂದ ಕಲಿತಿದ್ದೇನೆ" ಎಂದು ವಿಜಯರಾಘವನ್ ಹೇಳುತ್ತಾರೆ. "ಹಾಗೆ ಅವರು ನಮ್ಮ ಸಂಪನ್ಮೂಲವನ್ನು ತಮ್ಮ ಕೆಲಸಕ್ಕೆ ಬಳಸಬಹುದೇ ಎಂದು ಕೇಳಿದಾಗ, ನನಗೆ ದೊರೆತ ಗೌರವ ಎನ್ನುವಷ್ಟು ಸಂತಸವಾಯಿತು"

ಈ ಪ್ರಯೋಗಾಲಯದಲ್ಲಿ ಅತ್ಯಪಾಯಕಾರಿ ಜೀವಿಗಳ ಬಗ್ಗೆ ಸಂಶೋಧನೆ ನಡೆಸುವ ಏಕೈಕ ವ್ಯಕ್ತಿ ಮಿರ್ಝಾ. ಇದರಲ್ಲಿ ಡ್ರೊಸೋಫಿಯಾ, ಮೆಲೆನೊಗಸ್ಟರ್‍ನಂಥ ಖ್ಯಾತ ಮಾದರಿ ಜೀವಿಗಳ ಬಗ್ಗೆ ಸಂಶೋಧನೆ ಮಾಡುವ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ.

ವಿಜಯರಾಘವಾನಿ ಬಗ್ಗೆ

ನೂತನವಾಗಿ ಪತ್ತೆ ಮಾಡಿರುವ ವಿಜಯರಾಘವಾನಿ ಹಲ್ಲಿ ಇತರ ಹಲ್ಲಿಗಳಂತೆ ಕಂಡುಬರುತ್ತದೆ ಹಾಗೂ ಹೆಮಿಡಕ್ಟಿಲಸ್ ಪ್ರಬೇಧಕ್ಕೆ ಸೇರುತ್ತದೆ. ಆದರೆ ವಾಸ್ತವವಾಗಿ ಇದು ಭಿನ್ನ ಪ್ರಬೇಧವಾಗಿದ್ದು, ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಿಂದ ಇದು ಪ್ರತ್ಯೇಕಿಸಲ್ಪಟ್ಟಿದೆ.

ಹಲ್ಲಿಗಳ ಬಗ್ಗೆ ಇತ್ತೀಚೆಗೆ ಇವರು ಪ್ರಕಟಿಸಿದ ಪ್ರಬಂಧದಲ್ಲಿ, ಮೈದಾನವಾಸಿ ಹಲ್ಲಿಗಳ ವಿಶಿಷ್ಟ ಗುಣಲಕ್ಷಣವೆಂದರೆ, ಇವುಗಳು ನದಿಗಳನ್ನು ದಾಟಲಾರವು ಎಂದು ಹೇಳಿದ್ದಾರೆ. ಈ ಹಲ್ಲಿಗಳಿಗೆ ನದಿ ದಾಟಲು ಸಾಧ್ಯವಾಗದೇ ಇರುವುದರಿಂದ, ಅವು ಸ್ವತಂತ್ರ್ಯವಾಗಿ ಅಭಿವೃದ್ಧಿ ಹೊಂದಿದವು ಹಾಗೂ ಸುಮಾರು 22 ಹಾಗೂ 15 ದಶಲಕ್ಷ ವರ್ಷಗಳ ಹಿಂದೆ ಪ್ರತ್ಯೇಕವಾಗಿ ಬೆಳವಣಿಗೆ ಹೊಂದಿದವು.

"ಭಾರತದ ಮುಕ್ತ ಗಿಡಗಂಟಿಗಳಿರುವ ಪ್ರದೇಶಗಳಲ್ಲಿ ಕಂಡುಬರುವ ಈ ಜೀವವೈವಿಧ್ಯವನ್ನು ಎಲ್ಲೂ ಸೂಕ್ತವಾಗಿ ದಾಖಲೀಕರಿಸಿಲ್ಲ. ಹೊರಗೆ ಹೋಗಿ, ಹಂಚಿಕೆಯ ವರ್ಗೀಕರಣ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಬಯಸುವವರು ತೀರಾ ವಿರಳ. ಏಕೆಂದರೆ ಇದು ಜನಪ್ರಿಯ ಕ್ಷೇತ್ರವಲ್ಲ" ಎಂದು ಅವರು ಹೇಳುತ್ತಾರೆ.

ಈ ಜೀವವೈವಿಧ್ಯ ಹಂಚಿಕೆಯ ದಾಖಲೀಕರಣದ ಕೊರತೆಯಿಂದಾಗಿ, ಇದಕ್ಕೇ ವಿಶೇಷ ಸಂಶೋಧನೆಯಲ್ಲಿ ಮಿರ್ಝಾ ಒಲವು ಬೆಳೆಸಿಕೊಂಡರು. ಮುಂದಿನ ವರ್ಷ ಈ ವೇಳೆಗೆ, ತಾವು ಏಕಾಂಗಿಯಾಗಿ ಸಂಧೋನೆ ಮಾಡಿದ ಇಂಥ ವಿಶಿಷ್ಟ ಪ್ರಬೇಧಗಳ ಸಂಖ್ಯೆ 60ನ್ನು ದಾಟಲಿದೆ ಎಂಬ ವಿಶ್ವಾಸವಿದೆ. ಇದರಲ್ಲಿ ಹಲ್ಲಿಗಳು, ಆಮೆಗಳು ಹಾಗೂ ಹಾವುಗಳು ಸೇರುತ್ತವೆ ಎಂದು ಅವರು ಹೇಳುತ್ತಾರೆ.

ಹಂಚಿಕೆ ಮತ್ತು ಪರಿಸರ ವಿತರಣೆ ಬಗ್ಗೆ ಕಾರ್ಯ

ಮಿರ್ಝಾ ಅವರ ಕಾರ್ಯದಲ್ಲಿ ಎಲ್ಲ ಬಗೆಯ ಪ್ರಾಣಿಗಳು ಎದುರಾಗಿವೆ ಹಾಗೂ ಅವರನ್ನು ಛತ್ತೀಸ್‍ಗಢದಿಂದ ತ್ರಿಪುರಾ ವರೆಗೂ ಕರೆದೊಯ್ದಿದೆ. ಸ್ಥಳೀಯ ಜೀವಿಗಳ ಬಗ್ಗೆ ತಮಗೆ ಬೇಕಾದ ಎಲ್ಲ ಅಗತ್ಯ ಮಾಹಿತಿಗಳನ್ನೂ ಸ್ಥಳೀಯರ ಸ್ನೇಹ ಬೆಳೆಸಿಕೊಂಡು ಅವರಿಂದ ಪಡೆದಿದ್ದಾಗಿ ಅವರು ಹೇಳುತ್ತಾರೆ. ಅರಣ್ಯ ಇಲಾಖೆಯ ಜತೆಗೂ ಅವರು ಕೆಲಸ ಮಾಡಿದ್ದಾರೆ.

ಹಾವುಗಳ ಬಗ್ಗೆ ಅವರು ಪ್ರಕಟಿಸಿದ ಮೊದಲ ಪ್ರಬಂಧದಲ್ಲಿ, ಅವರು ಹೊಸ ಹಾವನ್ನು ಪತ್ತೆ ಮಾಡಿದ ಬಗ್ಗೆ ವಿವರಿಸಿದ್ದಾರೆ. ಇದು ಅವರು ಪತ್ತೆ ಮಾಡಿದ ಹೊಸ ಹಾವಿನ ಪ್ರಭೇಧ ಮಾತ್ರವಲ್ಲ; ಅವರು ಪತ್ತೆ ಮಾಡಿದ್ದು ಹೊಚ್ಚ ಹೊಸ ತಳಿ (ಜೀನಸ್). ಪ್ರಬೇಧಗಳ ಹಂಚಿಕೆ ವರ್ಗೀಕರಣದಲ್ಲಿ ಈ ಜೀನಸ್ ಎನ್ನುವುದು ಪೋಷಕ ಗುಂಪಿನಲ್ಲಿ ಸೇರುತ್ತದೆ. ಉದಾಹರಣೆಗೆ ಪ್ಯಾಂಥರಾ ಜೀನಸ್‍ನಲ್ಲಿ ಎಲ್ಲ ಬಗೆಯ ದೊಡ್ಡ ಬೆಕ್ಕುಗಳೆನಿಸಿದ ಹುಲಿ, ಸಿಂಹ, ಚಿರತೆ, ಜಾಗ್ವಾರ್ ಸೇರುತ್ತವೆ.

ಈ ಜೀನಸ್‍ಗೆ ಮಿರ್ಝಾ ವಲ್ಲಾಸೆಫೀಸ್ ಎಂದು ಹೆಸರಿಸಿದರು. ಖ್ಯಾತ ಪರಿಸರ ತಜ್ಞ ಅಲ್ಫ್ರೆಡ್ ರಸೆಲ್ ವೆಲ್ಲಾಸ್ ಗೌರವಾರ್ಥ ಈ ಹೆಸರು ನೀಡಿದ್ದಾರೆ. ಮಿರ್ಝಾ ಪಾಲಿಗೆ ವೆಲ್ಲಾಸ್ ಹೀರೊ. "ಪ್ರತಿಯೊಬ್ಬರಿಗೂ ಡಾರ್ವಿನ್ ಗೊತ್ತು. ಆದರೆ ಅವರ ಕಾಲದಲ್ಲೇ ಇದ್ದ ಮತ್ತೊಬ್ಬ ಮೇಧಾವಿ ವೆಲ್ಲಾಸ್ ಬಗ್ಗೆ ತಿಳಿದಿರುವವರು ವಿರಳ. ವೆಲ್ಲಾಸ್ ವಾಸ್ತವವಾಗಿ ವಿಕಾಸವಾದ ಮತ್ತು ನೈಸರ್ಗಿಕ ಆಯ್ಕೆಯ ಪರಿಕಲ್ಪನೆ ಬಗ್ಗೆ ಸ್ವತಂತ್ರ್ಯವಾಗಿ ಹಾಗೂ ಡಾರ್ವಿನ್‍ಗಿಂತ ವೇಗವಾಗಿ ನಿರ್ಧಾರಕ್ಕೆ ಬಂದಿದ್ದರು. ಇವರು ತೀರಾ ಯುವ ವಯಸ್ಸಿನವರು ಹಾಗೂ ಡಾರ್ವಿನ್‍ಗಿಂತ ಪ್ರತಿಭಾವಂತರಾಗಿದ್ದರು" ಎಂದು ವಿವರಿಸುತ್ತಾರೆ.

ಭವಿಷ್ಯ ಮತ್ತು ನೆರವು

ಸಂದರ್ಶಕ ವಿದ್ಯಾರ್ಥಿಯಾಗಿ ಸಂಶೋಧನೆ ನಡೆಸುತ್ತಿರುವ ಮಿರ್ಝಾ, ಅನುದಾನವನ್ನೇ ಅವಲಂಬಿಸಿದ್ದಾರೆ. ಆದರೆ ಬಹುತೇಕ ಅನುದಾನ ಅರ್ಜಿಗಳಿಗೆ ಸಂಶೋಧಕರು ವಿದ್ಯಾರ್ಥಿಗಳಾಗಿರಬೇಕು ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಮಿರ್ಝಾ ಅವರ ಅನುದಾನ ಮುಕ್ತಾಯ ಹಂತಕ್ಕೆ ಬಂದಿದೆ.

"ನನಗೆ ಅನುದಾನ ಸಿಕ್ಕಿರುವುದು ರುಫರ್ಡ್ ಫೌಂಡೇಷನ್‍ನಿಂದ. ಮತ್ತೆ ಅವರಿಗೆ ಅರ್ಜಿ ಸಲ್ಲಿಸಬೇಕಾಗಿದೆ. ರುಫರ್ಡ್ ಸ್ಮಾಲ್ ಗ್ರಾಂಟ್ಸ್, ಸಂರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆಗೆ ಅನುದಾನ ನೀಡುತ್ತಿದೆ.

ಮಿರ್ಝಾ ಎದುರಿಸುತ್ತಿರುವ ಇನ್ನೊಂದು ಸಮಸ್ಯೆಯೆಂದರೆ, ಸಂಶೋಧನೆಯಿಂದ ಸ್ನಾತಕೋತ್ತರ ಪದವಿ ಪಡೆಯುವುದಕ್ಕೆ ಸಂಬಂಧಿಸಿದ್ದು. ಪ್ರತಿ ಬಾರಿಯೂ ಅವರಿಗೆ ಅನುಮೋದನೆ ಇನ್ನೇನು ಸಿಗಬೇಕು ಎಂಬ ಹಂತಕ್ಕೆ ಬರುತ್ತದೆ. ಆದರೆ ಪ್ರಾಜೆಕ್ಟ್ ಗೈಡ್ ನಿವೃತ್ತರಾಗುವಂತ ಒಂದಲ್ಲ ಒಂದು ಸಮಸ್ಯೆಗಳು ಇದಕ್ಕೆ ತಡೆಯಾಗುತ್ತಿವೆ.

"ಬಹಳಷ್ಟು ಕಷ್ಟಪಟ್ಟು ಪತ್ತೆ ಹೊಸ ಮಾರ್ಗದರ್ಶಕರನ್ನು ಹುಡುಕಿದ್ದೇನೆ. ಆದರೆ ಅವರು ಜೀವವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದವರು ಎಂದು ಈಗ ಗೊತ್ತಾಗಿದೆ. ಇವು ಸಂರಕ್ಷಣಾ ಯೋಜನೆಗೆ ನನಗೆ ಮಾರ್ಗದರ್ಶಕರಾಗಲಾರರು" ಎಂದು ಮಿರ್ಝಾ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸಂಶೋಧನಾ ಸಂಸ್ಥೆಗಳು, ಪದವಿಗಳು ಮತ್ತು ಮಿರ್ಝಾ ಅವರ ಕೆಲಸದ ಬಗ್ಗೆ ವಿವರಿಸುವ ವಿಜಯರಾಘವನ್, "ನಮ್ಮ ಸಂಸ್ಥೆಗಳು ಸಾರ್ವಜನಿಕ ಪ್ರಯತ್ನಗಳು" ಎಂದು ಹೇಳುತ್ತಾರೆ. "ಪ್ರಮುಖ ಸಾಂಸ್ಥಿಕ ಯೋಜನೆಗಳಿಗೆ ಅವುಗಳದ್ದೇ ಆದ ಸ್ಥಾನವಿದೆ. ಆದರೆ ಪರ್ಯಾಯ ವ್ಯವಸ್ಥೆ ಅಂದರೆ ಸೌಲಭ್ಯ ಕಲ್ಪಿಸುವುದು ಹಾಗೂ ಅನೌಪಚಾರಿಕ ವಿಧಾನಗಳ ಸ್ಥಿತಿ ಚಿಂತಾಜನಕ" ಎಂದು ಅವರು ಅಭಿಪ್ರಾಯಪಡುತ್ತಾರೆ.

"ಯಾವ ಪ್ರಯತ್ನಗಳು ಹೇಗೆ ಯಶಸ್ಸು ತರಬಲ್ಲವು ಅಥವಾ ಉತ್ತೇಜಿಸಲ್ಲವು ಎನ್ನುವುದು ನಮಗೆ ತಿಳಿಯದು" ಎಂದು ಮಿರ್ಝಾ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ವಿಜಯರಾಘವನ್ ಹೇಳುತ್ತಾರೆ. "ಆದರೆ ಮುಕ್ತ ಪರಿಸರ ಹಲವು ಲಾಟರಿ ಟಿಕೆಟ್ ಖರೀದಿಸುತ್ತದೆ ಹಾಗೂ ಉತ್ತಮ ಸಾಧನೆ ಮಾಡುತ್ತದೆ. ತನ್ನ ಸದಸ್ಯರಿಂದಾಗಿ ಒಳ್ಳೆಯ ಸಾಧನೆಯನ್ನೂ ಮಾಡುತ್ತವೆ. ಝೀಶನ್‍ಗೆ ಇಂಥ ವಾತಾವರಣವನ್ನು ಬಳಸಿಕೊಳ್ಳುವ ಸಾಕಷ್ಟು ಶಕ್ತಿ ಹಾಗೂ ಯುಕ್ತಿ ಇದೆ. ಒಂದು ಗುಂಪು ಕೂಡಾ ಮಾಡಲಾಗದ್ದನ್ನು ಏಕಾಂಗಿಯಾಗಿ ಮಾಡುವ ಶಕ್ತಿ ಹಾಗೂ ಪ್ರತಿಭೆ ಇದೆ.

ಕೃಪೆ : theprint.in

share
ಸಂಧ್ಯಾ ರಮೇಶ್
ಸಂಧ್ಯಾ ರಮೇಶ್
Next Story
X