ಸೋಶಿಯಲ್ ಅಚೀವ್‌ಮೆಂಟ್ ಪೋರಂನಿಂದ ಕ್ರಿಸ್‌ಮಸ್ ಶುಭಾಶಯ

ಉಳ್ಳಾಲ, ಡಿ.28: ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ತೊಕ್ಕೊಟ್ಟು ಸಮೀಪದ ಸಿ.ಎಸ್.ಐ. ಬಿಷಪ್ ಸಾಜೆಂಟ್ ಸ್ಮಾರಕ ಚರ್ಚ್‌ಗೆ ಭೇಟಿ ನೀಡಿದ ಸೋಶಿಯಲ್ ಅಚೀವ್‌ಮೆಂಟ್ ಫೋರಂ ಸದಸ್ಯರು ಚರ್ಚ್‌ನ ಸಭಾ ಪಾಲಕ ರೆ. ಜಯಕುಮಾರ್ ಅವರಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿದರು.
ಈ ಸಂದರ್ಭ ಪೋರಂ ಅಧ್ಯಕ್ಷ ನಾಸಿರ್ ಸಾಮಣಿಗೆ, ಸ್ಥಾಪಕ ಅಧ್ಯಕ್ಷ ನಿಯಾಝ್ ಸಾಮಣಿಗೆ, ಕಾರ್ಯದರ್ಶಿ ಇಬ್ರಾಹೀಂ ಖಲೀಲ್, ಪದಾಧಿಕಾರಿಗಳಾದ ಯೆನೆಪೋಯ ಕಾಲೇಜಿನ ಪ್ರಾಧ್ಯಾಪಕ ನಿಯಾಝ್, ಕೋಶಾಧಿಕಾರಿ ಅಮೀರ್ ಶಾಫಿ, ಮೊಹಿದಿನ್ ಮಂಜನಾಡಿ, ಹನೀಫ್ ಕುತ್ತಾರ್, ಮನ್ಸೂರ್ ಸಾಮಣಿಗೆ, ರಹ್ಮಾನ್ ಕೊಣಾಜೆ, ನಶಾತ್ ಹಾಗೂ ಚರ್ಚ್‌ನ ಯುವಜನ ಅನ್ಯೋನ್ಯ ಕೂಟದ ಅಧ್ಯಕ್ಷ ಕೀರ್ತನ್ ಸೋನ್ಸ್, ಕಾರ್ಯದರ್ಶಿ ಪ್ರಶಾಂತ್ ಕೋಟ್ಯಾನ್, ಕೋಶಾಧಿಕಾರಿ ಶೈಲೇಶ್ ಪಾಲನ್ನ ಮತ್ತು ಸಲಹೆಗಾರರಾದ ಸ್ಟೀವನ್ ಸೋನ್ಸ್ ಮೊದಲಾದವರು ಉಪಸ್ಥಿತರಿದ್ದರು.
Next Story





