ಕಲ್ಲೇಗ: ಡಿ. 31ರಂದು ಖ್ಯಾತ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿರಿಂದ ಮತಪ್ರವಚನ

ಪುತ್ತೂರು, ಡಿ. 28: ಕಲ್ಲೇಗ ಜುಮಾ ಸಮಿತಿಯ ಅಧೀನದಲ್ಲಿರುವ ಯುವ ಸಂಘಟನೆ ಅಲ್ ಅಮೀನ್ ಯಂಗ್‍ಮೆನ್ಸ್ ಅಸೋಸಿಯೇಷನ್ ಇದರ ಬೆಳ್ಳಿ ಹಬ್ಬ ಡಿ. 31ರಂದು ಮಸೀದಿಯ ವಠಾರದಲ್ಲಿ ನಡೆಯಲಿದ್ದು ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಇವರಿಂದ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಜುಮಾ ಮಸೀದಿಯ ಅಧ್ಯಕ್ಷ ಬಿ.ಎ. ಶಕೂರ್ ಹಾಜಿ ಕಲ್ಲೇಗ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ. 31ರಂದು ರಾತ್ರಿ 7ಗಂಟೆಗೆ ಧಾರ್ಮಿಕ ಮತ ಪ್ರವಚನ ಆರಂಭವಾಗಲಿದೆ. ಸಯ್ಯದ್ ಅಹ್ಮದ್ ಪೂಕೋಯ ತಂಙಲ್ ದುವಾ ನೆರವೇರಿಸಲಿದ್ದಾರೆ. ಸ್ಥಳೀಯ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಉದ್ಘಾಟಿಸಲಿದ್ದಾರೆ. ಬಳಿಕ ಮುಖ್ಯ ಪ್ರಭಾಷಣ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಅನಿವಾಸಿ ಉದ್ಯಮಿ ಅಶ್ರಫ್ ಶಾ ಮಾಂತೂರು , ಬಶೀರ್ ಮೊಯ್ದೀನ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಸಂಯುಕ್ತ ಜಮಾತ್ ಅಧ್ಯಕ್ಷ ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅಲ್ ಅಮೀನ್ ಯಂಗ್‍ಮೆನ್ಸ್ ಅಸೋಸಿಯೇಷನ್ ಪದಾಧಿಕಾರಿಗಳಾದ ಅಬ್ದುಲ್ ರಶೀದ್ ಮುರ, ಕೆ. ಝಕೀರ್ ಹನೀಫ್, ಅಬೂಬಕ್ಕರ್ ಹಾಜಿ, ಶಮೀರ್ ಮುರ ಉಪಸ್ಥಿತರಿದ್ದರು.





