ನಾಪತ್ತೆಯಾದ ಮೀನುಗಾರರ ಮನೆಗೆ ಜೆಡಿಎಸ್ ಜಿಲ್ಲಾ ಪದಾಧಿಕಾರಿಗಳ ಭೇಟಿ

ಮಲ್ಪೆ, ಡಿ.28: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ ಬೋಟಿ ನೊಂದಿಗೆ ನಾಪತ್ತೆಯಾದ ಮಲ್ಪೆಯ ಮೀನುಗಾರರ ಮನೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಇಂದು ಭೇಟಿ ನೀಡಿ ಮನೆಯವರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮೀನುಗಾರಿಕಾ ಸಚಿವ ವೆಂಕಟ್‌ರಾವ್ ನಾಡೇಗೌಡರು ಈ ಕುರಿತು ಈಗಾಗಲೇ ಗೋವಾ ಹಾಗೂ ಮಹಾರಾಷ್ಟ್ರ ಸರಕಾರದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಕೋಸ್ಟಗಾರ್ಡ್‌ನವರು ತ್ವರಿತ ಕಾರ್ಯಚರಣೆ ನಡೆಸುತಿದ್ದಾರೆ. ಇದಕ್ಕಾಗಿ ಹೆಲಿಕಾಪ್ಟರ್‌ನ್ನು ಸಹ ಬಳಸಲಾಗುತ್ತಿದೆ ಎಂದವರು ತಿಳಿಸಿದರು.
ನಾಪತ್ತೆಯಾದ ಮೀನುಗಾರರೆಲ್ಲರೂ ಅತ್ಯಂತ ಶೀಘ್ರದಲ್ಲಿ ಪತ್ತೆ, ಸುರಕ್ಷಿತವಾಗಿ ಮನೆಯವರನ್ನು ಸೇರುವಂತಾಗಲಿ ಎಂದವರು ಹಾರೈಸಿದರು. ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷ ವಾಸುದೇವ ರಾವ್, ನಾಯಕರಾದ ಜಯಕುಮಾರ್ ಪರ್ಕಳ, ರೋಹಿತ್ ಕರಂಬಳ್ಳಿ, ಶಶಿಧರ ಅಮೀನ್ ಮಲ್ಪೆಇನ್ನಿತರರು ಹಾಜರಿದ್ದರು.
Next Story