ಬಸ್ಸಿನಲ್ಲಿ ಮೃತಪಟ್ಟ ಪ್ರಯಾಣಿಕ
ಕುಂದಾಪುರ, ಡಿ.28: ಗುರುವಾರ ರಾತ್ರಿ ಬೆಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಕುಂದಾಪುರಕ್ಕೆ ಪ್ರಯಾಣಿಸಲು ಟಿಕೆಟ್ ಪಡೆದು ಪ್ರಯಾಣಿಸುತಿದ್ದ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಪ್ರಯಾಣಿಕರೊಬ್ಬರು ಇಂದು ಬೆಳಗ್ಗೆ 7ಗಂಟೆಗೆ ಕೋಟೇಶ್ವರ ತಲುಪುವಾಗ ಮೃತಪಟ್ಟಂತೆ ಕಂಡುಬಂದಿದ್ದು, ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಮೃತ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಈವರೆಗೆ ಮೃತರ ವಾರೀಸುದಾರರು ಪತ್ತೆಯಾಗಿಲ್ಲ ಎಂದು ಕುಂದಾಪುರ ಡಿಪೋದ ಮ್ಯಾನೇಜರ್ ಕುಂದಾಪುರ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
Next Story