ವೈದ್ಯಕೀಯ ವಿದ್ಯಾರ್ಥಿಗೆ ನಿಂದನೆ: ಐವರ ಬಂಧನ

ಬೆಂಗಳೂರು, ಡಿ.28: ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಯೊಬ್ಬನಿಗೆ ನಿಂದಿಸಿ, ತಲೆ ಕೂದಲು ಕತ್ತರಿಸಿರುವ ಆರೋಪದ ಮೇಲೆ ಐವರನ್ನು ಇಲ್ಲಿನ ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಉತ್ತರ ಭಾರತ ಮೂಲದ ಕರಣ್ ಶರ್ಮಾ, ಇಂದ್ರಜಿತ್, ರಾಹುಲ್ ಝಾ, ಶುಭವ್ ಹಾಗೂ ಗೌತಮ್ ಎಂಬುವರು ಬಂಧಿತರು ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳು ಮದ್ಯದ ಅಮಲಿನಲ್ಲಿ ಕಿರಿಯ ಎಂಬಿಬಿಎಸ್ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿ ತಲೆಕೂದಲು ಕತ್ತರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಜೀವ ಬೆದರಿಕೆ ಆರೋಪದಡಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
Next Story





