ಡಾಂಬರು ಡಬ್ಬಿಗಳ ಕಳವು ಪ್ರಕರಣ: ಇಬ್ಬರು ಆರೋಪಿಗಳು ಸೆರೆ

ಬಂಟ್ವಾಳ, ಡಿ. 28: ಲಕ್ಷಾಂತರ ರೂ. ಮೌಲ್ಯದ ಡಾಂಬರು ಡಬ್ಬಿಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪುತ್ತೂರು ಸಮೀಪದ ಆದರ್ಶನಗರದ ನೆಕ್ಕಿಲಾಡಿ ನಿವಾಸಿ ಉಮರುಲ್ ಫಾರೂಕ್ (24) ಹಾಗೂ ವಿಟ್ಲ ಕಸಬಾ ಮೇಗಿನಪೇಟೆ ಮುಹಮ್ಮದ್ ಆಶ್ರಫ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ 43 ಬ್ಯಾರೆಲ್ ಡಾಂಬರ್ ಸಹಿತ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story