ದಿ ಓಶಿಯನ್ ಪರ್ಲ್ ಹೊಟೇಲ್ ನಲ್ಲಿ ನ್ಯೂ ಇಯರ್ ಪಾರ್ಟಿ: ಡೈಮಂಡ್ ನೆಕ್ಲೆಸ್, ಚಿನ್ನದ ನಾಣ್ಯ ಬಹುಮಾನಗಳ ಮಹಾಪೂರ

ಮಂಗಳೂರು, ಡಿ.28: ದಿ ಓಶಿಯನ್ ಪರ್ಲ್ ಹೊಟೇಲ್‌ನಿಂದ ಹೊಸ ವರ್ಷವನ್ನು ಸ್ವಾಗತಿಸಲು ಡಿ.31ರಂದು ಸಂಜೆ 7:30ಕ್ಕೆ ನಗರದ ಡಾ.ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್‌ಶನ್ ಸೆಂಟರ್‌ನಲ್ಲಿ ಬೃಹತ್ ಪಾರ್ಟಿಯನ್ನು ಆಯೋಜಿಸಿದೆ. ಹೊಸ ವರ್ಷದ ಸ್ವಾಗತಕ್ಕಾಗಿ ಆಯೋಜಿಸಲಾದ ಈ ಪಾರ್ಟಿಯಲ್ಲಿ ನಗರದಲ್ಲೇ ಅಭೂತ ಪೂರ್ವವಾದ ಬಹುಮಾನಗಳನ್ನು ಗೆಲ್ಲುವ ಅಪೂರ್ವ ಅವಕಾಶಗಳನ್ನು ಕಲ್ಪಿಸಿದೆ.
ಪಾರ್ಟಿಯಲ್ಲಿ ರಾಕಿಂಗ್ ಕಾರ್ಯಕ್ರಮ: ದಿ ಓಶಿಯನ್ ಪರ್ಲ್ ಹೊಟೇಲ್‌ನಿಂದ ಈ ಬಾರಿಯ ನ್ಯೂ ಇಯರ್ ಪಾರ್ಟಿಯು ಹಲವು ರಾಕಿಂಗ್ ಕಾರ್ಯಕ್ರಮಗಳನ್ನು ಒಳಗೊಂಡಿದೆ.
ಪ್ರಖ್ಯಾತ ಹಾಸ್ಯಗಾರ ಅಹಸಾನ್ ಖುರೇಷಿಯವರ ಹಾಸ್ಯ ಪ್ರದರ್ಶನ, ಸಂಗೀತ ನಿರ್ದೇಶಕ ಹಾಗೂ ಹಾಡುಗಾರ ಪ್ರಕಾಶ್ ಮಹಾದೇವನ್ ಮತ್ತು ರೂಪಾ ಪ್ರಕಾಶ್‌ರವರ ಹಾಡುಗಾರಿಕೆ, ಅರ್ಚನಾ ಮಹಾಜನ್ ಮತ್ತು ಹರೀಶ್ ಕುಮಾರ್‌ರವರ ಬಾಲಿವುಡ್ ಮತ್ತು ಹಾಲಿವುಡ್‌ನ ಹಾಡುಗಳು, ಹೆಜ್ಜೆನಾದ ತಂಡದಿಂದ ಹಾಲಿವುಡ್ ಡ್ಯಾನ್ಸ್ ಪ್ರದರ್ಶನ ಹೊಸ ವರ್ಷದ ಪಾರ್ಟಿಯ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ.
ರಿಯಾಝ್ ಇಂಡಿಯನ್‌ರವರ ಮಿಮಿಕ್ರಿ ಹಾಗೂ ಅತಿಥಿ ಜೋಡಿಗಳಿಂದ ವಿಶೇಷ ಡಿಜೆ ಕಾರ್ಯಕ್ರಮ ಸಂಭ್ರಮಾಚರಣೆಯನ್ನು ಅವಿಸ್ಮರಣೀಯವಾಗಿಸಲಿದೆ. ಜತೆಗೆ ಅನೇಕ ಗೇಮ್ಸ್‌ಗಳು ಹಾಗೂ ಕಾರ್ಯಕ್ರಮದ ನಿರೂಪಕರಾಗಿ ಪ್ರಖ್ಯಾತ ಆರ್‌ಜೆ ಸಾಹಿಲ್ ಝಹೀರ್ ಇರುವುದು ಈ ಬಾರಿಯ ನ್ಯೂ ಇಯರ್ ಪಾರ್ಟಿಯು ನೀವು ಹಿಂದೆಂದೂ ಕಾಣದ ಮನೋರಂಜನೆಯನ್ನು ನೀಡಲಿದೆ. ದಿ ಓಶಿಯನ್ ಪರ್ಲ್‌ನ ಮಾಸ್ಟರ್ ಶೆಪ್ ಅವರಿಂದ ತಯಾರಿಸಲ್ಪಟ್ಟ ರುಚಿಕರವಾದ ಗಾಲಾ ಬಫೆ ಮತ್ತಷ್ಟು ಆನಂದವನ್ನು ನೀಡಲಿದೆ.
ನೋಂದಣಿ: ನ್ಯೂ ಇಯರ್ ಪಾರ್ಟಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ದಿ ಓಶಿಯನ್ ಪರ್ಲ್, ಕೊಡಿಯಾಲ್‌ಬೈಲ್, ಮಂಗಳೂರು ಅಥವಾ ಡಾ. ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್‌ಶನ್ ಸೆಂಟರ್, ಎಂಜಿ ರಸ್ತೆ, ಮಂಗಳೂರು ಇವರನ್ನು ಸಂಪರ್ಕಿಸಬಹುದಾಗಿದೆ.
ಬಹುಮಾನಗಳ ಮಹಾಪೂರ:
ದಿ ಓಶಿಯನ್ ಪರ್ಲ್ ಹೊಟೇಲ್‌ನಿಂದ ಹೊಸ ವರ್ಷದ ಸ್ವಾಗತಕ್ಕಾಗಿ ನಡೆಯುವ ಬೃಹತ್ ಪಾರ್ಟಿಯಲ್ಲಿ ಹಲವು ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವಿದೆ. ಡೈಮಂಡ್ ನೆಕ್ಲೆಸ್ ಸೆಟ್ (ಪ್ರಥಮ ಬಹುಮಾನ), ಚಿನ್ನದ ನಾಣ್ಯ (ದ್ವಿತೀಯ), 1 ಸ್ಪೈಸ್ ಜೆಟ್ ಡೊಮೆಸ್ಟಿಕ್ ಫ್ಲೈಟ್ ಟಿಕೆಟ್ (ತೃತೀಯ), ಓಶಿಯನ್ ಪರ್ಲ್ ನವದಿಲ್ಲಿ/ಹುಬ್ಬಳ್ಳಿ/ಉಡುಪಿಯಲ್ಲಿ 1 ನೈಟ್ ಸ್ಟೇ ವೊಚರ್ (4ನೇ ಮತ್ತು 5ನೇ) ಬಹುಮಾನಗಳನ್ನು ಗೆಲ್ಲಬಹುದಾಗಿದೆ.







