ಬೆಂಗಳೂರು: ಪ್ರಯಾಣಿಕನ ಬ್ಯಾಗ್ ಹಿಂತಿರುಗಿಸಿದ ಆಟೊ ಚಾಲಕ
ಬೆಂಗಳೂರು, ಡಿ.28: ಆಟೊ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್ ಅನ್ನು ಪ್ರಯಾಣಿಕನಿಗೆ ಹಿಂತಿರುಗಿಸಿ ಚಾಲರೊಬ್ಬರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಾಲಕ ಐಷಕ್ ನಿಕಲ್ಸನ್ ಎಂಬವರ ಆಟೊದಲ್ಲಿ ಪ್ರಯಾಣಿಕರೊಬ್ಬರು ಶುಕ್ರವಾರ ನಗರದ ಹಲಸೂರು ಜಂಕ್ಷನ್ ಪ್ರಯಾಣಿಸುತ್ತಿದ್ದ ವೇಳೆ ಆಟೊದಲ್ಲೇ ತಮ್ಮ ಬ್ಯಾಗ್ ಅನ್ನು ಮರೆತು ಬಿಟ್ಟು ಹೋಗಿದ್ದರು. ಸಲ್ಪಸಮಯದ ನಂತರ ಐಷಕ್ ನಿಕಲ್ಸನ್ ಅವರು, ಬ್ಯಾಗ್ ಅನ್ನು ಗಮನಿಸಿ ತಕ್ಷಣ ಪೊಲೀಸ್ ಆಯುಕ್ತರ ಕಚೇರಿಯ ಸಾರ್ವಜನಿಕ ಸಂಪರ್ಕ ಕೊಠಡಿಗೆ ತಂದು ಒಪ್ಪಿಸಿದ್ದಾರೆ.
ನಂತರ ಐಷಕ್ ನಿಕಲ್ಸನ್ ಸಮ್ಮುಖದಲ್ಲಿಯೇ ಸಿಬ್ಬಂದಿ ಬ್ಯಾಗ್ ಅನ್ನು ಪರಿಶೀಲನೆ ನಡೆಸಿದಾಗ ಪ್ರಯಾಣಿಕನ ಮೊಬೈಲ್ ಸಂಖ್ಯೆ ದೊರೆತಿದೆ. ಬಳಿಕ, ಮನೋಜ್ ಭರತ್ ವಾಲ್ ಅವರನ್ನು ಸಂಪರ್ಕಿಸಿ, ಬ್ಯಾಗ್ನಲ್ಲಿದ್ದ ಗುರುತಿನ ಚೀಟಿ, ಬೀಗದ ಕೀ, ಡೆಲ್ ಕಂಪೆನಿ ಲ್ಯಾಪ್ಟಾಪ್ ಅನ್ನು ಹಿಂತಿರುಗಿಸಿದ್ದು, ಚಾಲಕ ಐಷಕ್ ನಿಕಲ್ಸನ್ ಅವರ ಪ್ರಾಮಾಣಿಕತೆಯನ್ನು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಪ್ರಸಂಶಿಸಿದ್ದಾರೆ.
Next Story