ಅಡ್ಯಾರ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಹೊತ್ತಿ ಉರಿದ ಟಿಪ್ಪರ್

ಮಂಗಳೂರು, ಡಿ.28: ನಗರದ ಹೊರವಲಯ ಅಡ್ಯಾರ್‌ನಲ್ಲಿ ಟಿಪ್ಪರ್‌ನಿಂದ ಮೈದಾನಕ್ಕೆ ಮಣ್ಣನ್ನು ಹಾಕುವ ಸಂದರ್ಭ ವಿದ್ಯುತ್ ತಂತಿಗೆ ಸ್ಪರ್ಶಿಸಿ ಟಿಪ್ಪರ್ ಭಾಗಶಃ ಹೊತ್ತಿ ಉರಿದ ಘಟನೆ ಶುಕ್ರವಾರ ನಡೆದಿದೆ.
ನೇರಳಕಟ್ಟೆಯ ಯಶೋಧರ ಎಂಬವರಿಗೆ ಈ ಟಿಪ್ಪರ್ ಸೇರಿದ್ದು, ಟಿಪ್ಪರ್‌ನಲ್ಲಿದ್ದ ಚಾಲಕನಿಗೆ ಯಾವುದೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಟಿಪ್ಪರ್‌ಗೆ ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿದ ಪಾಂಡೇಶ್ವರ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಟಿಪ್ಪರ್‌ನಲ್ಲಿದ್ದ ಮಣ್ಣನ್ನು ಅನ್‌ಲೋಡ್ ಮಾಡುವ ಸಂದರ್ಭ ಚಾಲಕ ಹಿಂಭಾಗ ನೋಡದೇ ಟಿಪ್ಪರ್ ಚಲಾಯಿಸಿದ್ದಾನೆ. ಟಿಪ್ಪರ್‌ಗೆ ಹೈಟೆನ್ಶನ್ ವೈರ್ ತಗುಲಿ ಅದರ ಎರಡು ಟೈರ್‌ಗಳು ಅರ್ಧ ಗಂಟೆಗೂ ಹೆಚ್ಚು ಕಾಲ ಹೊತ್ತಿ ಉರಿದಿವೆ. ಈ ವೇಳೇ ವಾಹನದ ಬ್ಯಾಟರಿಗೂ ಬೆಂಕಿ ವಿಸ್ತಿರಿಸಿ ಸುಟ್ಟು ಕರಕಲಾಗಿದೆ. ಅವಘಡದಿಂದ ಸುಮಾರು 50 ಸಾವಿರ ರೂ. ಮೌಲ್ಯದ ಸೊತ್ತು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಅಣ್ಣಪ್ಪನ್, ಫೈರ್‌ಮನ್‌ಗಳಾದ ಮಹಾಂತೇಶ್, ಮಂಜುನಾಥ ಮಿರ್ಚಿ, ಸುರೇಶ್, ಚಾಲಕ ಕಾರ್ತಿಕ್, ಹೋಮ್ ಗಾರ್ಡ್ ಶಿವರಾಜ್ ಪಾಲ್ಗೊಂಡಿದ್ದರು.