ಅಮ್ಲ, ಎಲ್ಗರ್ ಅರ್ಧಶತಕ: ದ. ಆಫ್ರಿಕಾಕ್ಕೆ ಮಣಿದ ಪಾಕ್

ಪ್ರಥಮ ಟೆಸ್ಟ್ ಸೆಂಚೂರಿಯನ್, ಡಿ.28: ಡೀನ್ ಎಲ್ಗರ್ ಹಾಗೂ ಹಾಶೀಮ್ ಅಮ್ಲ ಅವರ ಸಮಯೋಚಿತ ಅರ್ಧಶತಕಗಳ ನೆರವಿನಿಂದ ದ.ಆಫ್ರಿಕ ತಂಡವು ಪ್ರಥಮ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ಕೇವಲ ಮೂರನೇ ದಿನದಲ್ಲಿ ಪಂದ್ಯ ಫಲಿತಾಂಶ ಕಂಡಿದೆ. ಗೆಲುವಿಗೆ 149 ರನ್‌ಗಳ ಗುರಿ ಪಡೆದಿದ್ದ ಹರಿಣ ಪಡೆ 50.4 ಓವರ್‌ಗಳಲ್ಲಿ 151 ರನ್ ಗಳಿಸಿ ವಿಜಯೋತ್ಸವ ಆಚರಿಸಿತು. ಹಾಶೀಮ್ 63 ರನ್ ಗಳಿಸಿದರೆ ಎಲ್ಗರ್ ಬರೋಬ್ಬರಿ 50 ರನ್ ಗಳಿಸಿದರು. ಒಟ್ಟು ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ದ.ಆಫ್ರಿಕ ಗುರಿ ತಲುಪಿತು. ಎಲ್ಗರ್ 50 ರನ್ ಗಳಿಸಿ ಅರೆಕಾಲಿಕ ಬೌಲರ್ ಶಾನ್ ಮಸೂದ್‌ಗೆ ವಿಕೆಟ್ ಒಪ್ಪಿಸುವ ಪೂರ್ವದಲ್ಲಿ ಹಾಶೀಮ್ ಹಾಗೂ ಎಲ್ಗರ್ ಜೋಡಿ ಎರಡನೇ ವಿಕೆಟ್‌ಗೆ 119 ರನ್ ಜಮೆ ಮಾಡಿತ್ತು.
Next Story





