ರಾಷ್ಟ್ರೀಯ ಆಯ್ಕೆ ಟ್ರಯಲ್ಸ್: ಹೀನಾ, ಮನು ಭಾಕರ್ ಮಿಂಚು

ಹೊಸದಿಲ್ಲಿ, ಡಿ.28: ತಮ್ಮ ಪ್ರತಿಸ್ಪರ್ಧಿ ಶ್ವೇತಾ ಸಿಂಗ್ ಅವರನ್ನು ಮಣಿಸುವ ಮೂಲ ಶೂಟರ್ ಹೀನಾ ಸಿಧು, ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನ ಮಹಿಳೆಯರ 10 ಮೀ. ಏರ್‌ಪಿಸ್ತೂಲ್ ವಿಭಾಗದಲ್ಲಿ ಜಯ ಸಾಧಿಸಿದ್ದಾರೆ.
ಗುರುವಾರ ತಡರಾತ್ರಿ ನಡೆದ ಟಿ2 ವಿಭಾಗದಲ್ಲಿ ಹೀನಾ 243.7 ಅಂಕ ಗಳಿಸಿದರೆ, ಶ್ವೇತಾ ಸಿಂಗ್ 238 ಅಂಕಗಳಿಗೆ ತೃಪ್ತಿಪಟ್ಟರು.
ಮಹಿಳಾ ಟಿ1ನ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಜಯ ಸಾಧಿಸಿದ್ದ ಯುವ ಶೂಟರ್ ಮನು ಭಾಕರ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಎರಡನೇ ಟ್ರಯಲ್ಸ್‌ನ ಕಿರಿಯರ ವಿಭಾಗದಲ್ಲೂ ಪಾರಮ್ಯ ಮೆರೆದರು. ಹರ್ಯಾಣದ ಮನು, ತೆಲಂಗಾಣದ ಇಶಾ ಸಿಂಗ್ ಅವರನ್ನು 241.5-241.1 ಅಂಕಗಳ ಅಂತರದಿಂದ ಮಣಿಸಿದರು.
ಶುಕ್ರವಾರದ ಮತ್ತೊಂದು ಪ್ರಮುಖ ಫಲಿತಾಂಶದಲ್ಲಿ ಪಂಜಾಬ್‌ನ ಫತೆಸಿಂಗ್ ದಿಲ್ಲೊನ್ ಅವರು ಕಿರಿಯರ ಹಾಗೂ ಹಿರಿಯ ಪುರುಷರ 50 ಮೀ. ರೈಫಲ್ ಪ್ರೋನ್ ವಿಭಾಗದ ಎರಡನೇ ಟ್ರಯಲ್ಸ್‌ನಲ್ಲಿ ಜಯ ಸಾಧಿಸಿದರು.
Next Story





