ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ, ಪದವಿ ದಿನ

ಬಂಟ್ವಾಳ, ಡಿ. 29: ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ಹಮ್ಮಿಕೊಂಡಾಗ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಅವರು ಶನಿವಾರ ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಪದವಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದಾಗ ಪೋಷಕರ ಸಮಸ್ಯೆಗಳು ದೂರವಾಗುವುದರ ಜೊತೆಗೆ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಅವರು, ಮಹಿಳಾ ಶಿಕ್ಷಣಕ್ಕೆ ಸಂಘ-ಸಂಸ್ಥೆಗಳಿಗೆ ಸಹಕಾರ ನೀಡಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ರಿಜಿಸ್ಟರ್ ರವೀಂದ್ರಚಾರ್ಯ, ಬೋಳಂಗಡಿ ಹವ್ವ ಜುಮಾ ಮಸೀದಿ ಖತೀಬು ಮೌಲನಾ ಯಾಯ್ಯ ತಂಙಳ್ ಮಾತನಾಡಿದರು.
ಮಂಗಳೂರು ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಮರಿಯಮ್ ಸಾಹಿರಾ ಅಧ್ಯಕ್ಷತೆ ವಹಿಸಿದ್ದರು. ಪದವಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಪ್ರವಾದಿ ಅವರ ಬಗ್ಗೆ ಹಾಡು ಹಾಡಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಸಜಿಪಮೂಡ ಸರಕಾರಿ ಪಿಯು ಕಾಲೇಜಿನ ವೆಂಕಟರಮಣ ಆಚಾರ್ಯ, ಹಿದಯ ಪೌಂಡೇಶನ್ ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಝಕರಿಯಾ ಗೋಳ್ತಮಜಲು, ಖಜಾಂಜಿ ಮಿತ್ರದಾಸ ರೈ, ಸರ್ವ ಕಾಲೇಜು ಸಂಘದ ಉಪಾಧ್ಯಕ್ಷೆ ಸೈಫಾ ಆರಾ, ಆತೂರು ಆಯಿಷಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮೀನ್ ಹಸನ್, ಕಾಲೇಜ್ ಆಡಳಿತ ಸಮಿತಿ ಸಂಚಾಲಕ ಅಮಾನುಲ್ಲಾ ಖಾನ್, ಅಧ್ಯಕ್ಷ ಯಾಸೀನ್ ಬೇಗ್, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಪರ್ಲಿಯಾ, ಖಜಾಂಜಿ ಹೈದರ್ ಅಲಿ ನೀರ್ಕಜೆ, ಪದವಿ ವಿಭಾಗ ಅಧ್ಯಕ್ಷೆ ರಂಝಿನ, ಪಿಯು ವಿಭಾಗದ ಅಧ್ಯಕ್ಷೆ ಆಯಿಷತುಲ್ ಅಸಿಫಾ ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲೆ ಗೀತಾ ಜಿ. ಭಟ್ ವರದಿ ಮಂಡಿಸಿದರು. ವಿದ್ಯಾರ್ಥಿನಿ ಸಂಬ್ರಿನಾ ಕಿರಾತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಹ್ಮದ್ ಸ್ವಾಗತಿಸಿದರು. ಉಪನ್ಯಾಸಕಿ ತಾರಾಕ್ಷಿ ವಂದಿಸಿದರು. ನುಫಾೈಝ ಬಾನು ನಿರೂಪಿಸಿದರು. ಸಿಂಚನ ಸಹಕರಿಸಿದರು.