ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕವನಗಳ ಆಹ್ವಾನ
ಮಂಗಳೂರು, ಡಿ.29: ಜನವರಿ ಕೊನೆಯ ವಾರ ಮೂರು ದಿನಗಳ ಕಾಲ ಮಂಗಳೂರು ಪುರಭವನದಲ್ಲಿ ಜರಗಲಿರುವ ದ.ಕ. ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಉದಯೋನ್ಮುಖ ಕವಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ.
10ನೇ ತರಗತಿಯ ಒಳಗಿನ ವಿಭಾಗ, ಕಾಲೇಜು ವಿಭಾಗ ಹಾಗೂ ಮುಕ್ತ ವಿಭಾಗಗಳಿದ್ದು, ಕನ್ನಡ ಭಾಷಾ ಕವನಗಳನ್ನು ಮಾತ್ರ ಕಳುಹಿಸಿಕೊಂಡುವಂತೆ ಕೋರಲಾಗಿದೆ. ಕವನಗಳು ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಕವನಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಜ.15ರೊಳಗಾಗಿ ತಮ್ಮ ವಿಳಾಸ, ದೂರವಾಣಿ ಸಂಖ್ಯೆ, ವಿದ್ಯಾರ್ಥಿಗಳು ಶಾಲಾ ಮುಖ್ಯಸ್ಥರಿಂದ ದೃಢೀಕರಣದೊಂದಿಗೆ ಸಂಚಾಲಕರು, ಕನ್ನಡ ಕವನ ವಿಭಾಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಕೂರ ಪ್ರತಿಷ್ಠಾನ, ‘ಶ್ರೀಕೃಷ್ಣ ಸಂಕೀರ್ಣ’, ಕೊಡಿಯಾಲ್‌ಬೈಲ್, ಮಂಗಳೂರು-3 ಈ ವಿಳಾಸಕ್ಕೆ ಕಳುಹಿಸುವಂತೆ ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story