Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ನೀಲಗಿರಿ ಮತ್ತು ಕನ್ನಡಿಗರು

ನೀಲಗಿರಿ ಮತ್ತು ಕನ್ನಡಿಗರು

ಕೆ.ಪಿ. ಸ್ವಾಮಿಕೆ.ಪಿ. ಸ್ವಾಮಿ29 Dec 2018 7:14 PM IST
share
ನೀಲಗಿರಿ ಮತ್ತು ಕನ್ನಡಿಗರು

ನೀಲಗಿರಿಯಲ್ಲಿರುವ ಕನ್ನಡಿಗರ ಪೈಕಿ ಅನೇಕರು ತಮ್ಮ ಮೂಲ ಊರುಗಳ ಸಂಪರ್ಕ ಕಳೆದುಕೊಂಡು ಸ್ಥಳೀಯರೇ ಆಗಿದ್ದಾರೆ. ಆದರೆ ಎಲ್ಲಾದರೂ ಇರು ಎಂತಾದರೂ ಇರು ನೀ ಕನ್ನಡಿಗನಾಗಿರು ಎಂಬಂತೆ, ತಾಯ್ನುಡಿಯನ್ನು ಮರೆತಿಲ್ಲ. ಕನ್ನಡ ಕಲಿಯುವ ಅವಕಾಶದಿಂದ ವಂಚಿತರಾದದ್ದು ಬೇರೆಯೇ ವಿಷಯ. ಹೊಸತಲೆಮಾರಿನ ಕನ್ನಡಿಗರ ಪೈಕಿ ಅನೇಕರು ನಾಡಿನ ಬೇರೆ ಬೇರೆ ಕಡೆಗಳಲ್ಲಿ ಹಾಗೂ ಹೊರ ದೇಶಗಳಲ್ಲಿ ಹುದ್ದೆಗಳಲ್ಲಿದ್ದಾರೆ. ಎಸ್ಟೇಟುಗಳ ಒಡೆಯರಾಗಿದ್ದಾರೆ. ಹೊಟೇಲ್ ಉದ್ಯಮಿಗಳಾಗಿದ್ದಾರೆ. ವಿದ್ಯಾಸಂಸ್ಥೆಗಳನ್ನು ನಡೆಸುತ್ತಾರೆ, ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಎಲ್ಲರೂ ನೀಲಗಿರಿಯನ್ನು ಗಾಢವಾಗಿ ಪ್ರೀತಿಸುವವರಾಗಿ ಉಳಿದಿದ್ದಾರೆ.

ಬೇರೆ ಬೇರೆ ಕಾಲಘಟ್ಟಗಳಲ್ಲಿ ನೀಲಗಿರಿ ಪ್ರದೇಶವು ವಿಜಯನಗರದ, ಮೈಸೂರು ಅರಸರ, ಟಿಪ್ಪು ಸುಲ್ತಾನರ, ಕೆಲವು ಸಂದರ್ಭಗಳಲ್ಲಿ ಅನೇಕ ಪಾಳೇಗಾರರ ಆಳ್ವಿಕೆಗೊಳಪಟ್ಟಿದ್ದುದು ತಿಳಿದುಬರುತ್ತದೆ. ಮೇಲಿನ ಕಾಲಘಟ್ಟಗಳಲ್ಲಿ ಬೇರೆಬೇರೆ ಕಾರಣಗಳಿಂದ ನೀಲಗಿರಿ ಸೀಮೆಗೆ ವಲಸೆ ಬಂದು ಅಲ್ಲಿನ ಆದಿವಾಸಿ ಜನರೊಂದಿಗೆ ಬದುಕಲು ಆರಂಭಿಸಿದ್ದ ಬಡಗರನ್ನು ಹೊರತು ಪಡಿಸಿದರೆ, ಮೈಸೂರು ಸೀಮೆಯಿಂದ ಮತ್ತು ಕನ್ನಡ ಮಾತಾಡುತ್ತಿದ್ದ ಗಡಿಭಾಗಗಳ ಜನರು ವ್ಯಾಪಾರ ವಹಿವಾಟು ಹಾಗೂ ಇತರ ಉದ್ದೇಶಗಳಿಗಾಗಿ ನೀಲಗಿರಿಗೆ ಬಂದು ಹೋಗುತ್ತಿದ್ದರು. ಅಲ್ಲಿಯೇ ನೆಲೆ ನಿಂತವರು ಹೆಚ್ಚು ಸಂಖ್ಯೆಯಲ್ಲಿರಲಿಲ್ಲ ಎಂದು ಹೇಳಬಹುದು.

ನಾಲ್ಕನೆಯ ಮೈಸೂರು ಯುದ್ಧದ ನಂತರ (1799) ಬಿಳಿಯರು ನೀಲಗಿರಿ ಯಲ್ಲಿ ನೆಲೆಸತೊಡಗಿದಾಗ, ಅವರ ಪರಿಚಾರಿಕೆಗೆಂದು ಮೈಸೂರು ಸೀಮೆಯಿಂದ ಕೆಲವು ಕುಟುಂಬಗಳವರನ್ನು ಕರೆತಂದರು. ಬಹುಮಟ್ಟಿಗೆ ಬೆಳ್ಳೂರು, ನಾಗಮಂಗಲ, ಹಿರಿಸಾವೆ ಮತ್ತು ತುಮಕೂರು- ಮುಂತಾದ ಕಡೆಗಳಿಂದ ಬಂದ ಕುಟುಂಬಗಳು ಅವು.

ಪ್ರಾರಂಭದಲ್ಲಿ ಬಿಳಿಯರ ಬಂಗಲೆಗಳ ಸಮೀಪದಲ್ಲೇ ಪರಿಚಾರಕರಿಗೂ ತಕ್ಕಮಟ್ಟಿನ ವಸತಿ ಸೌಕರ್ಯ ಕಲ್ಪಿಸಿಕೊಡುತ್ತಿದ್ದರು. ಅವರು ನೀಲಗಿರಿಯ ಹವಾಮಾನದ ವೈಪರೀತ್ಯಕ್ಕೆ ಒಗ್ಗಿಕೊಳ್ಳುವುದರ ಜೊತೆಗೆ ಒಡೆಯರ ಬಂಗಲೆಗಳಲ್ಲಿ ಪರಿಚಾರಕರಾಗಿ, ಮಾಲಿಗಳಾಗಿ ಕೆಲಸಕ್ಕೆ ನಿಂತರು. ಕನ್ನಡ ಮಾಲಿಗಳ ಕೆಲಸದ ಅಚ್ಚುಕಟ್ಟುತನವನ್ನು ಮೆಚ್ಚಿ ಬಿಳಿಯರು ತಮ್ಮ ಗೆಳೆಯರಿಗೆ ಇವರ ಬಗ್ಗೆ ಶಿಫಾರಸು ಮಾಡತೊಡಗಿದ ಕಾರಣ ಇವರ ಬೇಡಿಕೆಯೂ ಹೆಚ್ಚಿತು. ಬಂದವರು ರೈತ ಕುಟುಂಬಗಳವರು. ಹೈನುಗಾರಿಕೆಯಲ್ಲೂ ಪಳಗಿದವರು. ಒಂದೆರಡು ಹಸುಗಳನ್ನು ಸಾಕಿ ಬಂಗಲೆಗಳಿಗೆ, ಕ್ಲಬ್‌ಗಳಿಗೆ, ಕಾಫಿ ಟೀ ಅಂಗಡಿಗಳಿಗೆ ಹಾಲು ಸರಬರಾಜು ಮಾಡುತ್ತ ತಮ್ಮ ಬದುಕನ್ನು ಉತ್ತಮಗೊಳಿಸತೊಡಗಿದರು. ಬಂಗಲೆಗಳಿಗೆ ಪರಿಚಾರಕರ, ಮಾಲಿಗಳ ಅಗತ್ಯವಿದ್ದಾಗ, ತಮ್ಮ ಊರುಗಳಿಗೆ ಬರೆದು ಪರಿಚಿತರನ್ನು, ನೆಂಟರಿಷ್ಟರನ್ನು ಕರೆಸಿಕೊಳ್ಳತೊಡಗಿದರು.

ಹೀಗೆ ಬಂದವರೆಲ್ಲ ಊಟಿ, ಕಾಂದಲ್, ಹೊಸಮಂದೆ, ಆಡಶೋಲೆ, ಅರವಂಗಾಡು, ಕುನ್ನೂರು - ಮುಂತಾದ ಊರುಗಳಲ್ಲಿ ನೆಲೆಸಿದರು. ಸದಾ ಕೈಯಲ್ಲಿ ಕಾಸು ಚಲಾವಣೆಯಲ್ಲಿರುತ್ತಿದ್ದ ಇಂಥವರನ್ನು ಮೈಸೂರು ಸೀಮೆಯವರು ‘ನೀಲಗಿರಿ ಸಾಹುಕಾರರು’ ಎಂದು ಕರೆಯುತ್ತಿದ್ದುದುಂಟು. ಮೈಸೂರು ಸೀಮೆಯಲ್ಲಿ ಎರಡು ಬಾರಿ ಭೀಕರ ಬರಗಾಲ ತಲೆದೋರಿದಾಗ ನೀಲಗಿರಿಯ ಕಡೆಗೆ ಕನ್ನಡ ವಲಸೆಗಾರರ ಎರಡನೇ ಅಲೆ ಪ್ರಾರಂಭವಾಯಿತು.

ಅದೇ ಸಂದರ್ಭದಲ್ಲಿ ನೀಲಗಿರಿಯ ಹಲವು ಭಾಗಗಳಲ್ಲಿ ಕಾಫಿ, ಟೀ, ತೋಟಗಳ ಅಭಿವೃದ್ಧಿ ಪ್ರಾರಂಭವಾಗಿ, ಜೊತೆಗೆ ರಸ್ತೆ ಕಾಮಗಾರಿ ನಡೆಯ ತೊಡಗಿದಾಗ ಮಂಡ್ಯ, ಮೈಸೂರು, ತುಮಕೂರು, ಕೊಳ್ಳೇಗಾಲ - ಮುಂತಾದ ಕಡೆಗಳಿಂದ ಕೆಲಸಗಾರರು ಹೆಚ್ಚು ಸಂಖ್ಯೆಯಲ್ಲಿ ನೀಲಗಿರಿ ಬೆಟ್ಟ ಹತ್ತಿದರು. ಈ ಸಂದರ್ಭದಲ್ಲಿ ಕೇರಳ ಮತ್ತು ತಮಿಳುಡಿನ ಹಲವು ಕಡೆಗಳಿಂದಲೂ ನೀಲಗಿರಿಗೆ ಕೆಲಸಗಾರರು ಬಂದರಾದರೂ, ಕೆಲವು ತೋಟಗಳಲ್ಲಿ ಕನ್ನಡಿಗ ಕೂಲಿಯಾಳುಗಳ ಸಂಖ್ಯೆ ಹೆಚ್ಚಾಗಿದ್ದಿತು.

ಕೆಲವರು ವ್ಯಾಪಾರ ವಹಿವಾಟು ಮತ್ತು ಸಣ್ಣಪುಟ್ಟ ಉದ್ಯೋಗಗಳಲ್ಲಿ ತೊಡಗಿಕೊಂಡರೆ. ಹೆಚ್ಚಿನವರು ಕೃಷಿ, ಹೈನುಗಾರಿಕೆಗಳಲ್ಲಿ ತೊಡಗಿಕೊಂಡರು. ರಸ್ತೆ ಕಾಮಗಾರಿ ಮತ್ತು ಕಾಫಿ, ಟೀ ತೋಟಗಳಲ್ಲಿ ಸೇರಿಕೊಂಡವರು ತಮ್ಮ ಕಾಯಕದಲ್ಲೇ ಕೈಲಾಸ ಕಂಡವರು, ನೀಲಗಿರಿಯ ಅಭಿವೃದ್ಧಿಗಾಗಿ ದುಡಿಯುತ್ತಾ ಅನಾಮಿಕರಾಗಿ ಉಳಿದವರು. ಅನೇಕರು ತಮ್ಮ ಬುದ್ಧಿವಂತಿಕೆ ಮತ್ತು ಒದಗಿಬಂದ ಅವಕಾಶಗಳನ್ನು ಬಳಸಿಕೊಂಡು ಶ್ರೀಮಂತರೂ ಆದರು, ಸಾಕಷ್ಟು ಕೀರ್ತಿ ಗಳಿಸಿದರು. ಹೀಗೆ ಹಣ ಕೀರ್ತಿ ಸಂಪಾದಿಸಿದ ಕೆಲವರು ಬೇರೆ ಬೇರೆ ದುಶ್ಚಟಗಳ ಸಹವಾಸದಿಂದ ತಮ್ಮಲ್ಲಿದ್ದುದನ್ನು ಕಳೆದುಕೊಂಡು ನಿರ್ಗತಿಕರೂ ಆದುದುಂಟು!

ಭಾರತ ಸ್ವಾತಂತ್ರ ಗಳಿಸಿದ ಸಂದರ್ಭದಲ್ಲಿ ಮತ್ತು ಆನಂತರದ ದಿನಗಳಲ್ಲಿ, ನೀಲಗಿರಿಯಲ್ಲಿ ಬಿಳಿಯರ ಬಂಗಲೆಗಳಲ್ಲಿ ಪರಿಚಾರಕರಾಗಿ, ಮಾಲಿಗಳಾಗಿ, ಹೈನುಗಾರರಾಗಿ ಬದುಕು ಸವೆಸುತ್ತಿದ್ದ ಕಾಯಕ ಜೀವಿಗಳ ಬದುಕಿನಲ್ಲಿ ಪವಾಡವೆನ್ನಬಹುದಾದ ಘಟನೆಗಳು ಜರುಗಿದವು.

‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ!’ ಚಳವಳಿಯ ಅಬ್ಬರದಿಂದ ತತ್ತರಿಸಿ ಹೋಗಿದ್ದ ಅನೇಕ ಮಧ್ಯಮ ಮತ್ತು ಸಾಮಾನ್ಯವರ್ಗದ ಬಿಳಿಯರು, ಇಲ್ಲಿದ್ದ ತಮ್ಮ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ಸ್ವದೇಶಕ್ಕೆ ಹೋಗುವ ಒತ್ತಡಕ್ಕೆ ಸಿಲುಕಿದ್ದರು. ಸಾವಕಾಶವಾಗಿ ಮಾರುಕಟ್ಟೆ ಬೆಲೆಗೆ ತಮ್ಮ ಆಸ್ತಿಯನ್ನು ಮಾರಾಟಮಾಡಲು ಅವಕಾಶವಿರಲಿಲ್ಲ. ಆಗ ಅನೇಕ ಬಿಳಿಯರು, ಅಷ್ಟು ವರ್ಷ ವಿಶ್ವಾಸದಿಂದ ತಮ್ಮ ಸೇವೆ ಮಾಡಿಕೊಂಡಿದ್ದವರಿಗೆ ತಮ್ಮ ಬಂಗಲೆ ಮತ್ತು ಸಣ್ಣ ತೋಟಗಳನ್ನು ಕಡಿಮೆ ಬೆಲೆಗೇ ಮಾರಾಟ ಮಾಡಿದರು! ನಿನ್ನೆವರೆಗೆ ಬಂಗಲೆಯ ಪರಿಚಾರಕರಾಗಿದ್ದ ಅನೇಕರು ದಿನ ಬೆಳಗಾಗುವುದರೊಳಗೆ ಅದೇ ಬಂಗಲೆಯ ಒಡೆಯರಾದ ಪವಾಡ ಅದು!

ಇಂಥ ಕಾಯಕ ಜೀವಿಗಳ ಮಕ್ಕಳ ಪೈಕಿ ಕೆಲವರು ಕೃಷಿ, ಹೈನುಗಾರಿಕೆಯನ್ನು ಮುಂದುವರಿಸಿದರು ಮತ್ತೆ ಕೆಲವರು ವಿದ್ಯಾವಂತರಾಗಿ ಬೇರೆ ಬೇರೆ ಕ್ಷೇತ್ರಗಳಿಗೆ ಪ್ರವೇಶಿಸಿದರು.

ಇಲ್ಲಿ ಮತ್ತೊಂದು ವಿಷಯ ದಾಖಲಿಸಬೇಕು. ಆಂಗ್ಲೋ-ಇಂಡಿಯನ್ನರು (ಚಟ್ಟೆಕಾರರು) ಆವರೆಗೆ ತಮ್ಮನ್ನು ಪ್ರತಿಷ್ಠಿತರ ವರ್ಗಕ್ಕೆ ಸೇರಿಸಿಕೊಂಡಿದ್ದರು. ಸ್ಥಳೀಯರೊಂದಿಗೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಆದರೆ ಬ್ರಿಟಿಷ್ ಸಾಮ್ರಾಜ್ಯದ ಬುಡ ಅಲುಗಾಡತೊಡಗಿದಾಗ ನೀಲಗಿರಿಯಲ್ಲಿ ವಾಸವಿದ್ದ ಬಿಳಿಯರಂತೆಯೇ ಆಂಗ್ಲೋ-ಇಂಡಿಯನ್ನರು ಸಹ ಗಾಬರಿಗೊಂಡರು. ಇಲ್ಲಿ ಉಳಿಯಲು ಬಯಸದವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ವಲಸೆ ಹೋಗಲು ಬ್ರಿಟಿಷ್ ಸರಕಾರ ಅನುಮತಿ ನೀಡಿತು. ಕೆಲವರು ಇಲ್ಲಿಯೇ ಉಳಿದರು. ಕಡಿಮೆ ಬೆಲೆಗೆ ಬಂಗಲೆ ಆಸ್ತಿ ಖರೀದಿಸುವ ಅವಕಾಶ ಅವರಿಗೂ ಲಭಿಸಿತು!

ನಗರಗಳಲ್ಲಿ ನೆಲೆಸಿದ ಕನ್ನಡಿಗರು ತಮಗೊದಗಿದ ಅವಕಾಶಗಳನ್ನು ಬಳಸಿ ಕೊಂಡರು. ಬದುಕನ್ನು ಸುಧಾರಿಸಿಕೊಂಡು ಶ್ರೀಮಂತರಾದರು. ಬರಗಾಲದ ಬವಣೆಯಿಂದ ಸ್ವಂತ ಊರು ಬಿಟ್ಟು ನೀಲಗಿರಿ ಬೆಟ್ಟ ಹತ್ತಿ, ದಣಿವರಿದ ಶ್ರಮದಿಂದ ಬದುಕು ಹಸನುಗೊಳಿಸಿಕೊಂಡವರ ಪೈಕಿ, ಊಟಿ ಸಮೀಪದ ಕಲ್ಲಟ್ಟಿ ಗ್ರಾಮದಲ್ಲಿ ನೆಲೆಸಿದ್ದ ಶಿವನಂಜಯ್ಯ ಮತ್ತು ಅವರ ತಂದೆ ರಾಮಯ್ಯ - ಇವರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ಮೈಸೂರು ಸೀಮೆಯ ಶ್ರವಣಬೆಳಗೊಳದ ಸಮೀಪದ ಜಿನ್ನಾಪುರ ಗ್ರಾಮದವರು ರಾಮಯ್ಯ. ಅವರು 1900ರ ಆಸುಪಾಸಿನಲ್ಲಿ ಕಲ್ಲಟ್ಟಿ ಗ್ರಾಮದಲ್ಲಿ ನೆಲೆಸಿದ್ದರು. ಕೃಷಿಕರಾದ್ದರಿಂದ ತೋಟಗಾರಿಕೆಯಲ್ಲಿ ಅವರಿಗೆ ಆಸಕ್ತಿ. ಅವರ ಮಗ ಶಿವನಂಜಯ್ಯನವರ ಕಾಲದಲ್ಲಿ ಅವರಿಗೆ ಸುಮಾರು 100 ಎಕರೆಯಷ್ಟು ತರಕಾರಿ ತೋಟವಿತ್ತು. ಇಂಗ್ಲಿಷ್ ತರಕಾರಿ ಮತ್ತು ಸೊಪ್ಪುಗಳನ್ನು ಬೆಳೆಸುತ್ತಿದ್ದರು. ಅಲ್ಲದೆ ಅವರ ಕುರಿಮಂದೆಯಲ್ಲಿ ಸುಮಾರು 500 ಕುರಿಗಳಿದ್ದವು. ಊಟಿ ಮಾರುಕಟ್ಟೆಯಲ್ಲಿ ಅವರಿಗೆ ಒಂದು ಅಂಗಡಿಯಿತ್ತು. ಅವರ ತೋಟದ ತರಕಾರಿಗಳಿಗೆ ಬಹು ಬೇಡಿಕೆ ಇರುತ್ತಿತ್ತು.

ಆಗ ಊಟಿ ಮಾರುಕಟ್ಟೆಗೆ ತರಕಾರಿ ಮೂಟೆ ಸಾಗಿಸುವುದು ಭಾರೀ ಸಾಹಸದ ಕೆಲಸವಾಗಿತ್ತು. ಈಗಿನಂತೆ ರಸ್ತೆಗಳಿರಲಿಲ್ಲ. ತೋಟದಲ್ಲಿ ಕಿತ್ತ ತರಕಾರಿಯನ್ನು ಕುದುರೆಗಳ ಬೆನ್ನಮೇಲೆ ಸಾಗಿಸಬೇಕಾಗಿತ್ತು. ಅದಕ್ಕೆಂದೇ ಅವರ ಬಳಿ ಹತ್ತು ಕುದುರೆಗಳಿದ್ದವು. ಕಲ್ಲಟ್ಟಿಯಿಂದ ಕವರಟ್ಟಿ, ಜಕ್ಕನಾರೆ ಮಾರ್ಗವಾಗಿ ಬೆಟ್ಟದ ದಾರಿಯಲ್ಲಿ ಕುದುರೆಗಳು ಬೆಳಗಿನಜಾವ ಐದು ಗಂಟೆಗೆಲ್ಲ ಊಟಿ ಮಾರುಕಟ್ಟೆಗೆ ಮೂಟೆ ಹೊತ್ತು ತರುತ್ತಿದ್ದವು. ಕಲ್ಲಟ್ಟಿಯಿಂದ ರಾತ್ರಿ 3 ಗಂಟೆಗೇ ಅವು ಬೆಟ್ಟ ಏರತೊಡಗುತ್ತಿದ್ದವು. ಈ ವಹಿವಾಟು ಶಿವನಂಜಯ್ಯನವರ ಮಕ್ಕಳು ಮೊಮ್ಮಕ್ಕಳ ಕಾಲದಲ್ಲಿ ಮುಂದುವರಿಯಲಿಲ್ಲ. ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಕಾಫಿ ಟೀ ತೋಟಗಳಲ್ಲಿ ಕೂಲಿ ಕೆಲಸಗಾರರಾಗಿ ಸೇರಿದ ಕನ್ನಡಿಗರು ತಮ್ಮ ಜೊತೆಗೆ ತಮ್ಮ ಸಂಸ್ಕೃತಿಯನ್ನೂ ತಂದರು. ಅವರ ಮೂಲ ನೆಲೆಯ ಜನಪದ ಹಾಡುಗಳನ್ನು, ಸೋಬಾನೆ ಪದಗಳನ್ನು ಮರೆಯಲಿಲ್ಲ. ಹಾಗೆಯೇ ನಾಟಕಗಳನ್ನು ಬಯಲಾಟಗಳನ್ನೂ ಮರೆಯಲಿಲ್ಲ. ಈ ಜನ ಸಾಮಾನ್ಯರು ಸಂಸ್ಕೃತಿ ವಾಹಕರೂ ಆದರು.

ನೀಲಗಿರಿಯಲ್ಲಿರುವ ಕನ್ನಡಿಗರ ಪೈಕಿ ಅನೇಕರು ತಮ್ಮ ಮೂಲ ಊರುಗಳ ಸಂಪರ್ಕ ಕಳೆದುಕೊಂಡು ಸ್ಥಳೀಯರೇ ಆಗಿದ್ದಾರೆ. ಆದರೆ ಎಲ್ಲಾದರೂ ಇರು ಎಂತಾದರೂ ಇರು ನೀ ಕನ್ನಡಿಗನಾಗಿರು ಎಂಬಂತೆ, ತಾಯ್ನುಡಿಯನ್ನು ಮರೆತಿಲ್ಲ. ಕನ್ನಡ ಕಲಿಯುವ ಅವಕಾಶದಿಂದ ವಂಚಿತರಾದದ್ದು ಬೇರೆಯೇ ವಿಷಯ. ಹೊಸತಲೆಮಾರಿನ ಕನ್ನಡಿಗರ ಪೈಕಿ ಅನೇಕರು ನಾಡಿನ ಬೇರೆ ಬೇರೆ ಕಡೆಗಳಲ್ಲಿ ಹಾಗೂ ಹೊರ ದೇಶಗಳಲ್ಲಿ ಹುದ್ದೆಗಳಲ್ಲಿದ್ದಾರೆ. ಎಸ್ಟೇಟುಗಳ ಒಡೆಯರಾಗಿದ್ದಾರೆ. ಹೊಟೇಲ್ ಉದ್ಯಮಿಗಳಾಗಿದ್ದಾರೆ. ವಿದ್ಯಾಸಂಸ್ಥೆಗಳನ್ನು ನಡೆಸುತ್ತಾರೆ, ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಎಲ್ಲರೂ ನೀಲಗಿರಿಯನ್ನು ಗಾಢವಾಗಿ ಪ್ರೀತಿಸುವವರಾಗಿ ಉಳಿದಿದ್ದಾರೆ.

share
ಕೆ.ಪಿ. ಸ್ವಾಮಿ
ಕೆ.ಪಿ. ಸ್ವಾಮಿ
Next Story
X