ವಿಶ್ವ ಮಾನವ ಪರಿಕಲ್ಪನೆ ಸಾಕಾರಗೊಳ್ಳಲಿ: ಶೀಲಾ ಶೆಟ್ಟಿ

ಉಡುಪಿ, ಡಿ.29: ಮಾನವರಲ್ಲಿ ಪರಸ್ಪರ ಧರ್ಮ, ಜಾತಿ, ರಾಷ್ಟ್ರ ರಾಷ್ಟ್ರಗಳ ನಡುವಿನ ದ್ವೇಷ, ವೈಮನಸ್ಯಗಳ ಕಂದಕ ದೂರವಾಗಿ ಕುವೆಂಪು ಅವರ ವಿಶ್ವ ಮಾನವ ಪರಿಕಲ್ಪನೆ ಎಲ್ಲಡೆ ಸಾಕಾರಗೊಳ್ಳಬೇಕು. ಕುವೆಂಪು ಅವರ ಕೃತಿಗಳ ಅಧ್ಯಯನದಿಂದ ಮನುಜ ಮತ ವಿಶ್ವಪಥದಲ್ಲಿ ನಡೆಯುವಂತಾಗಬೇಕು ಎಂದು ಉಡುಪಿ ಜಿಪಂನ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಹೇಳಿದ್ದಾರೆ.
ಶನಿವಾರ, ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆದಿ ಉಡುಪಿ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡು ತಿದ್ದರು. ಕುವೆಂಪು ಸಾರಸ್ವತ ಲೋಕದ ಅಪೂರ್ವ ನಕ್ಷತ್ರವಾಗಿದ್ದು, ತಮ್ಮ ಕೃತಿಗಳ ಮೂಲಕ ಸ್ಮರಣೀಯರು ಎಂದವರು ನುಡಿದರು.
ಕುವೆಂಪು ಅವರ ರಚನೆಯ ನಾಟಕ, ಕಾದಂಬರಿ, ಗ್ರಂಥಗಳು ಮತ್ತು ಅವರ ಆತ್ಮಕಥನ, ಮಾನವನ ವ್ಯಕ್ತಿತ್ವ, ಅವನ ಮನಸ್ಸಿನ ಒಳಗಿನ ಸಂಘರ್ಷಗಳು, ಈ ಸಂಘರ್ಷಗಳಿಂದ ಹೊರಬಂದು, ಮಾನವ ಜಾತಿ ತಾನೊಂದೆ ವಲಂ ಎಂಬ ಸತ್ಯ ಅರಿವಾಗಿ ಮನುಜ ಮತ ವಿಶ್ವ ಪಥದಲ್ಲಿ ನಡೆಯುವ ಹಾದಿಯನ್ನು ತೋರುತ್ತವೆ. ಕುವೆಂಪು ಕೃತಿಗಳನ್ನು ಪ್ರತಿಯೊಬ್ಬರು ಓದಬೇಕು ಎಂದು ಶೀಲಾ ಶೆಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಕುವೆಂಪು ಕುರಿತು ವಿಶೇಷ ಉಪನ್ಯಾಸ ನೀಡಿದ ಕೋಟ ಪಡುಕೆರೆಯ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ನೀಲಾವರ ಮಾತನಾಡಿ, ಜಗತ್ತಿನ ಪ್ರಖ್ಯಾತ ಚಿಂತಕರು, ದಾರ್ಶನಿಕರು, ಬರಹಗಾರರು, ಮಾನವ ಹಕ್ಕು ಹೋರಾಟಗಾರರ ಚಿಂತೆಯ ಸಾರ ಕುವೆಂಪು ಅವರ ಸಾಹಿತ್ಯಗಳಲ್ಲಿವೆ ಎಂದು ಅಭಿಪ್ರಾಯ ಪಟ್ಟರು.
ಕುವೆಂಪು ಅವರ ವಿಶ್ವ ಮಾನವ ಪರಿಕಲ್ಪನೆ ಅಲ್ಪ ಮಾನವನನ್ನು ವಿಶ್ವ ಮಾನವ ನನ್ನಾಗಿ ಮಾಡಲಿದೆ. ಸರ್ವೋದಯ, ಸಮಾನತೆ ತತ್ವಗಳು, ಮಾನವೀಯ ಚಿಂತನೆಗಳ ಮೂಲಕ ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಸಂದೇಶವನ್ನು ಕುವೆಂಪು ನೀಡಿದ್ದಾರೆ. ವೌಡ್ಯ ಆಚರಣೆಗಳನ್ನು ವಿರೋಧಿ ಸುತಿದ್ದ ಅವರು ತಮ್ಮ ಕೃತಿಗಳಲ್ಲಿ ಅವುಗಳನ್ನು ಪುಷ್ಠೀಕರಿಸಿಲ್ಲ. ಕನ್ನಡದ ನಾಡುನುಡಿ ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ ಇದ್ದ ಕುವೆಂಪು ಕನ್ನಡ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಿದ್ದರು. ಜಗತ್ತಿಗೆ ಮಾನವ ಸಂದೇಶ ನೀಡಿದ ಕುವೆಂಪು ಸದಾ ಸ್ಮರಣೀಯರು ಎಂದು ಹೇಳಿದರು.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಎಸ್ಪಿಕುಮಾರಚಂದ್ರ, ಆದಿ ಉಡುಪಿ ಪ್ರೌಢಶಾಲೆಂು ಮುಖ್ಯೋಪಧ್ಯಾಯನಿ ಕವಿತಾ ಉಪಸ್ಥಿತರಿದ್ದರು. ಕುವೆಂಪು ಕುರಿತು ಏರ್ಪಡಿ ಸಿದ್ದ ಪ್ರಬಂದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿ, ಹಿರಿಯ ತಾಂತ್ರಿಕ ವೆುೀಲ್ವಿಚಾರಕಿ ಪೂರ್ಣಿಮಾ ನಿರೂಪಿಸಿದರು.







