ಪ್ರವಾದಿ ನಿಂದನೆ ಆರೋಪ: ಸರವು ಮುಬಾರಕ್ ಯೂತ್ ಫೆಡರೇಶನ್ ದೂರು

ಬಂಟ್ವಾಳ, ಡಿ. 29: ಪ್ರವಾದಿ ನಿಂದನೆ ಆರೋಪದಡಿ ಖಾಸಗಿ ಸುದ್ದಿವಾಹಿನಿಯೊಂದರ ನಿರೂಪಕ ಅಜಿತ್ ಹನುಮಕ್ಕನವರ್ ಮತ್ತು ವ್ಯವಸ್ಥಾಪಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸರವು ಮುಬಾರಕ್ ಯೂತ್ ಫೆಡರೇಶನ್ ವತಿಯಿಂದ ವಿಟ್ಲ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ನೀಡಲಾಯಿತು.
ಈ ನಿಯೋಗದಲ್ಲಿ ಮುಬಾರಕ್ ಯೂತ್ ಫೆಡರೇಶನ್ ಅಧ್ಯಕ್ಷ ಝಿಯಾದ್ ಪಿ., ಕಾರ್ಯದರ್ಶಿ ಖಾಲಿದ್, ಸದಸ್ಯರಾದ ನಾಸಿರ್, ಇಬ್ರಾಹಿಂ ಪಂಜಿಗದ್ದೆ, ಹನೀಫ್ ಸರವು ಉಪಸ್ಥಿತರಿದ್ದರು.
Next Story