ಪ್ರವಾದಿ (ಸ) ಬಗ್ಗೆ ನಿಂದನಾತ್ಮಕ ಪ್ರಸ್ತಾಪ: ಕ್ರಮಕ್ಕೆ ಆಗ್ರಹಿಸಿ ಗೃಹ ಸಚಿವರಿಗೆ ಎಂಎಂವೈಸಿ ಮನವಿ
ಬೆಂಗಳೂರು, ಡಿ. 29: ಪ್ರೊ.ಭಗವಾನ್‌ರನ್ನು ವಿಶ್ಲೇಷಿಸುವ ಭರದಲ್ಲಿ ಖಾಸಗಿ ಟಿವಿ ನಿರೂಪಕ ಅಜಿತ್ ಹನುಮಕ್ಕನವರ್ ಇಸ್ಲಾಮಿನ ಪ್ರವಾದಿಯವರ ಬಗ್ಗೆ ನಿಂದನಾತ್ಮಕವಾಗಿ ಪ್ರಸ್ತಾಪಿಸಿರುವುದನ್ನು ಎಂಎಂವೈಸಿ ತೀವ್ರವಾಗಿ ಖಂಡಿಸಿದೆ.
ಖಾಸಗಿ ಟಿವಿಯಲ್ಲಿ ಪ್ರೊ.ಭಗವಾನ್ ಒಂದು ಸಮುದಾಯದ ದೇವರನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವುದನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯ ಸೇರಿ ಸರ್ವಧರ್ಮದವರು ಒಪ್ಪಿಕೊಳ್ಳುವ ಪ್ರವಾದಿ ಮುಹಮ್ಮದ್‌ರ ಜೀವನ ಕ್ರಮದ ಅಸಹನೆಯ ಸಿದ್ಧಾಂತ ಭಯೋತ್ಪಾದಕ ಟಿಪ್ಪು ಸುಲ್ತಾನ್ ಹುಟ್ಟಿಕೊಳ್ಳಲು ಕಾರಣ ಎಂಬಿತ್ಯಾದಿ ಮಾತುಗಳನ್ನು ಬಳಸಿ ಒಂದು ಧರ್ಮದವರ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದು ಎಂಎಂವೈಸಿ ಅಧ್ಯಕ್ಷ ಎಚ್.ಅಬೂಬಕ್ಕರ್ ಆರೋಪಿಸಿದ್ದಾರೆ.
ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ರೀತಿಯಲ್ಲಿ ಒಂದು ಧರ್ಮದ ಪ್ರವಾದಿಯನ್ನು ನಿಂದಿಸಿರುವ ಟಿವಿ ನಿರೂಪಕನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು, ಈ ಸಂಬಂಧ ಗೃಹ ಸಚಿವ ಎಂ.ಬಿ.ಪಾಟೀಲ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಪ್ರಕಟನೆ ತಿಳಿಸಿದೆ.





