ವಿವಿ ಪದವಿ ಪರೀಕ್ಷೆ: ಕ್ರಾಸ್ಲ್ಯಾಂಡ್ ಕಾಲೇಜಿನ ಪ್ರಥಮ ಸಹಿತ ಮೂರು ರ್ಯಾಂಕ್

ಹಂಸವೇಣಿ, ಅರವಿಂದ ನಾಯಕ್, ಬೊಜ್ಜ ಬರ್ನಾಲ್ಡ್ ಪೌಲ್
ಬ್ರಹ್ಮಾವರ, ಡಿ.29: ಮಂಗಳೂರು ವಿವಿ ಕಳೆದ ಏಪ್ರಿಲ್-ಮೇನಲ್ಲಿ ನಡೆಸಿದ ಪದವಿ ಪರೀಕ್ಷೆಯ ರ್ಯಾಂಕ್ ವಿಜೇತರ ಪಟ್ಟಿಯನ್ನು ಪ್ರಕಟಿಸಿದ್ದು, ಬ್ರಹ್ಮಾವರದ ಕ್ರಾಸ್ಲ್ಯಾಂಡ್ ಕಾಲೇಜಿಗೆ ಮೂರು ರ್ಯಾಂಕ್ಗಳು ಲಭಿಸಿವೆ.
ಬಿ.ಎ. ಅಂತಿಮ ಪದವಿ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಬೆಂಗಳೂರು ಮೂಲದ ಹಂಸವೇಣಿ ಎಸ್.ಕೆ(89.02) ವಿವಿಗೆ ಪ್ರಥಮ ರ್ಯಾಂಕ್ ಪಡೆದರೆ, ಚಾಂತಾರಿನ ಅರವಿಂದ ನಾಯಕ್ ಸಿ.ಎ (85.94) ನಾಲ್ಕನೇ ರ್ಯಾಂಕ್ ಹಾಗೂ ಬೊಜ್ಜ ಬರ್ನಾಲ್ಡ್ ಪೌಲ್(85.32) ಐದನೇ ರ್ಯಾಂಕ್ ಗಳಿಸಿದ್ದಾರೆ. ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಅಭಿನಂದಿಸಿದೆ ಎಂದು ಪ್ರಾಂಶುಪಾಲ ಪ್ರೊ.ಸ್ಯಾಮುಯೆಲ್ ಕೆ ಸ್ಯಾಮುಯೆಲ್ ತಿಳಿಸಿದ್ದಾರೆ.
Next Story