ಚಾನೆಲ್ ನಿರೂಪಕನಿಂದ ಪ್ರವಾದಿ ನಿಂದನೆ ಆರೋಪ: ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ನಿಂದ ಠಾಣೆಗೆ ದೂರು

ಉಪ್ಪಿನಂಗಡಿ,ಡಿ.29: ಪ್ರವಾದಿ ಮುಹಮ್ಮದ್ ಪೈಗಂಬರ್ (ಸ)ರವರನ್ನು ನಿಂದನೆ ಮಾಡಿ ಸಮಾಜದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ರೀತಿಯಲ್ಲಿ ವರ್ತಿಸಿ ಅಗೌರವ ತೋರಿದ್ದಲ್ಲದೇ ಮುಸ್ಲಿಮರ ಧಾರ್ಮಿಕ ಭಾವನೆಯನ್ನು ಕೆರಳಿಸಿದ್ದಾರೆಂದು ಆರೋಪಿಸಿ, ಖಾಸಗಿ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರು ಹಾಗೂ ಚಾನಲ್ ವಿರುದ್ಧ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಮಿತಿಯು ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿತು.
ಈ ಸಂದರ್ಭ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷ ಸ್ವಾದಿಖ್ ಮುಈನಿ ಗಡಿಯಾರ್, ಉಪಾಧ್ಯಕ್ಷರಾದ ಹಾಫಿಳ್ ತೌಸೀಫ್ ಕೆಮ್ಮಾನ್ ಹಾಗೂ ಖಲಂದರ್ ಬುಡೋಳಿ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಕೆ.ಪಿ ಖಲಂದರ್ ಪಾಟ್ರಕೋಡಿ, ಸೆಕ್ಟರ್ ಕೋಶಾಧಿಕಾರಿ ಸಿದ್ದೀಖ್ ಪೆರ್ನೆ, ಸೆಕ್ಟರ್ ಸದಸ್ಯ ಜಾಬಿರ್ ಮಿತ್ತೂರು ಹಾಗೂ ಸಂಶುದ್ದೀನ್ ಉಸ್ತಾದ್ ಗಡಿಯಾರ್ ಜತೆಗಿದ್ದರು.
Next Story