ಸೈನ್ಸ್ ಮೋಡೆಲ್ ಸ್ಪರ್ಧೆ: ಮಣೂರು ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕುಂದಾಪುರ, ಡಿ. 29: ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು ಇಲ್ಲಿನ ವಿದ್ಯಾರ್ಥಿಗಳಾದ ಮುಹಮ್ಮದ್ ಸಿನಾನ್ ಮತ್ತು ಶ್ರೇಯಸ್ ಎಂಬವರು ಜಿಲ್ಲಾ ಮಟ್ಟದಲ್ಲಿ ನಡೆದಂತಹ ಸೈನ್ಸ್ ಮೋಡೆಲ್ ಸ್ಪರ್ಧೆಯಲ್ಲಿ ವಿದ್ಯುತ್ ರಹಿತ ಮೋಟಾರ್ ಮೂಲಕ ಬಾವಿ ನೀರೆತ್ತುವ ಯೋಜನೆಯನ್ನು ಪ್ರಾಯೋಜಿಸಿ ಪ್ರದರ್ಶಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಅವರು ಆಯ್ಕೆಯಾಗಿದ್ದು, ಶಾಲೆಗೆ, ಊರಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗಿದೆ.
Next Story