ಹನೂರಿನಲ್ಲಿ ಕುವೆಂಪು ದಿನಾಚರಣೆ

ಹನೂರು,ಡಿ.29: ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ರಾಷ್ಟ್ರಕವಿ ಕುವೆಂಪುರವರು ಹಳ್ಳಿಯಲ್ಲಿ ಹುಟ್ಟಿ ತಮ್ಮ ಚಿಂತನೆ ತತ್ವ ಆದರ್ಶಗಳ ಮೂಲಕ ವಿಶ್ವ ವ್ಯಾಪ್ತಿ ಹೆಸರನ್ನು ಮಾಡಿದವರು ಎಂದು ಪಪಂ ಮುಖ್ಯಾಧಿಕಾರಿ ಎಸ್.ಡಿ ಮೋಹನ್‍ಕೃಷ್ಣ ಹೇಳಿದರು.
ಹನೂರು ಪಟ್ಟಣ ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ದಿನಾಚರಣೆಯ ಪ್ರಯುಕ್ತ ವಿಶ್ವಮಾನವ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದರು. ಕುವೆಂಪು ಅವರಲ್ಲಿ ಸೌಂದರ್ಯದ ಅನ್ವೇಷಣೆ, ಸಾಮಾಜಿಕ ಹಾಗೂ ವೈಜ್ಞಾನಿಕ ಮನೋಭಾವನೆ ಅಗಾಧವಾಗಿ ಬೇರೂರಿದ್ದವು. ಅವರು 29 ಕವನ ಸಂಕಲನ, ಸಾವಿರಾರು ಗೀತೆಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಮಮತಾ, ಉಪಾಧ್ಯಕ್ಷ ಬಸವರಾಜು ಹಾಗೂ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.
Next Story





