ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ನೂತನ ಪದಾಧಿಕಾರಿಗಳ ಆಯ್ಕೆ

ನರಿಂಗಾನ, ಡಿ.29: ಎಸ್ಸೆಸ್ಸೆಫ್ ಮಂಜನಾಡಿ ಸ್ಪೆಕ್ಟರ್ ಇದರ ಮಹಾಸಭೆಯು ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿಯವರ ನೇತೃತ್ವದಲ್ಲಿ ಅಲ್-ಮದೀನ ಮಂಜನಾಡಿಯಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಡಿವಿಷನ್ ಅಧ್ಯಕ್ಷರಾದ ಮುನೀರ್ ಸಖಾಫಿಯವರ ಉದ್ಘಾಟಿಸಿದರು.
ಮೊಯ್ದಿನ್ ಮೊರ್ಲ ವಾರ್ಷಿಕ ವರದಿ ವಾಚಿಸಿದರು ಮತ್ತು ಶರೀಫ್ ಕಲ್ಕಟ್ಟ ಲೆಕ್ಕ ಪತ್ರ ಮಂಡಿಸಿದರು. ಖುಬೈಬ್ ತಂಙಲ್ ರವರು ಪ್ರಾಸ್ತಾವಿಕ ಭಾಷಣ ಮಾಡಿದ ಬಳಿಕ ರಾಜ್ಯ ಸಮಿತಿಯ ಕಾರ್ಯಕಾರಿ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್ ಸಂಘಟನಾ ತರಗತಿ ಕೈಗೊಂಡರು. ನೂತನ ಕಮಿಟಿಯ ರಚನೆಗೆ ಡಿವಿಷನ್ ಕಾರ್ಯದರ್ಶಿ ಹಮೀದ್ ತಲಪಾಡಿ ನೇತೃತ್ವ ನೀಡಿದರು.
ನೂತನ ಅಧ್ಯಕ್ಷರಾಗಿ ಇಬ್ರಾಹಿಮ್ ಅಹ್ಸನಿ ಸತತವಾಗಿ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಮೊಯ್ದಿನ್ ಮೊರ್ಲ ಮರು ಆಯ್ಕೆಯಾದರು. ಕೋಶಾಧಿಕಾರಿಯಾಗಿ ಅನೀಸ್ ಕೊಲ್ಲರಕೊಡಿ, ಉಪಾಧ್ಯಕ್ಷರಾಗಿ ಶರೀಫ್ ಕಲ್ಕಟ್ಟ, ಮಸೂದ್ ಬಾಅಸನಿ ಹಾಗು ಹಸೈನಾರ್ ಝುಹ್ರಿ ಆಯ್ಕೆಯಾದರು. ಜೊತೆ ಕಾರ್ಯದರ್ಶಿಗಳಾಗಿ ಝಾಹಿದ್ ಸಾರ್ತಬೈಲ್, ಮುನೀರ್ ಕಲ್ಮಿಂಜ ಆಯ್ಕೆಯಾದರು.
ಆಫೀಸ್ ಸೆಕ್ರೇಟರಿಯಾಗಿ ಮಜೀದ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ರಝೀನ್ ಕಲ್ಕಟ್ಟ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಮೀದ್ ಬಂಡಸಾಲೆ, ಇರ್ಶಾದ್ ಮುಸ್ಲಿಯಾರ್ ಮಂಜನಾಡಿ, ಅಲ್ತಾಫ್ ಮಂಜನಾಡಿ, ಸತ್ತಾರ್ ಸಅದಿ ಅನ್ಸಾರ್ ನಗರ, ಉಮರ್ ಕಲ್ಕಟ್ಟ, ಶಬೀರ್ ಕೊಲ್ಲರಕೋಡಿ, ಆಮಿರ್ ಕೊಲ್ಲರಕೋಡಿ, ಶಫೀಕ್ ಟಿ. ತೌಡುಗೋಳಿ, ಶಫೀಕ್ ಎಸ್. ತೌಡುಗೋಳಿ, ಫಾರೂಕ್ ತೌಡುಗೋಳಿ, ಅರ್ಶಿದ್ ಕಲ್ಮಿಂಜ, ರಶೀದ್ ಕಲ್ಮಿಂಜ, ರಫೀಕ್ ಬಂಡಸಾಲೆ, ಇರ್ಫಾನ್ ಬಂಡಸಾಲೆ, ಮುಸ್ತಫ ನೆಕ್ಕರೆ, ಜಾಬಿರ್ ಸಾರ್ತಬೈಲ್ ಆಯ್ಕೆಯಾದರು.