ಸಾಧಕರ ಗುಂಪು ಸೇರಿದ ಮಾಯಾಂಕ್ ಅಗರ್ವಾಲ್
ಮೆಲ್ಬೋರ್ನ್ ಟೆಸ್ಟ್

ಮೆಲ್ಬೋರ್ನ್, ಡಿ.29: ಇಲ್ಲಿಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸೀಸ್ ವಿರುದ್ಧದ ಮೂರನೇ ಟೆಸ್ಟ್‌ನಎರಡೂ ಇನಿಂಗ್ಸ್‌ಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕನ್ನಡಿಗ ಮಾಯಾಂಕ್ ಅಗರ್ವಾಲ್ ಗಣ್ಯರ ಗುಂಪಿಗೆ ಸೇರಿದ್ದಾರೆ.
ಅಗರ್ವಾಲ್ ತಮ್ಮ ಚೊಚ್ಚಲ ಪಂದ್ಯವಾಗಿರುವ ಪ್ರಸಕ್ತ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ದಿಟ್ಟ ಅರ್ಧಶತಕ(76) ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ ಸಮಯೋಚಿತ 42 ರನ್ ಗಳಿಸಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ನಿಂತು ಆಡಿದ ಅಗರ್ವಾಲ್ ಅವರ ಬ್ಯಾಟಿಂಗ್‌ಗೆ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 76 ರನ್‌ಗಳಿಗಿಂತ ಹೆಚ್ಚು ವೌಲ್ಯವಿದೆ.
ಒಟ್ಟಾರೆ ಎರಡೂ ಇನಿಂಗ್ಸ್ ಸೇರಿ ಅಗರ್ವಾಲ್ ಗಳಿಸಿದ 118 ರನ್, ಭಾರತದ ಆರಂಭಿಕ ದಾಂಡಿಗನೊಬ್ಬ ವಿದೇಶಿ ನೆಲದಲ್ಲಿ ತನ್ನ ಚೊಚ್ಚಲ ಟೆಸ್ಟ್‌ನಲ್ಲಿ ಗಳಿಸಿದ ಎರಡನೇ ಅತಿದೊಡ್ಡ ಸ್ಕೋರ್ ಆಗಿದೆ. ಈ ಪಟ್ಟಿಯಲ್ಲಿ ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್(132ರನ್) ಪ್ರಥಮ ಸ್ಥಾನದಲ್ಲಿದ್ದಾರೆ.
Next Story





