ರಾಷ್ಟ್ರೀಯ ಆಯ್ಕೆ ಟ್ರಯಲ್ಸ್: ಚೌಧರಿಗೆ ವಿಶ್ವದಾಖಲೆಗಿಂತ ಅಧಿಕ ಅಂಕ

ಪುಣೆ, ಡಿ.29: ಯೂಥ್ ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಶ್ಯನ್ ಗೇಮ್ಸ್‌ಗಳಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಬಳಿಕ ಯುವ ಶೂಟರ್ ಸೌರಭ್ ಚೌಧರಿ ಮತ್ತೊಂದು ಸಾಧನೆ ಮಾಡಿದ್ದಾರೆ. ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನ ಹಿರಿಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 4.6 ಅಂಕ ಗಳಿಸುವ ಮೂಲಕ ವಿಶ್ವದಾಖಲೆಗಿಂತ ಹೆಚ್ಚಿನ ಸ್ಕೋರ್‌ನ್ನು ಅವರು ದಾಖಲಿಸಿದ್ದಾರೆ.
16 ವರ್ಷ ವಯಸ್ಸಿನ ಸೌರಭ್, ಫೈನಲ್‌ನಲ್ಲಿ 248.2 ರಷ್ಟು ಗುರಿಗೆ ಶೂಟ್ ಮಾಡಿ 4.6 ಅಂಕಗಳನ್ನು ಗಳಿಸಿದರು.ಆ ಮೂಲಕ ಉಕ್ರೇನ್‌ನ ಶೂಟರ್ ಓಲೆಹ್ ಒಮೆಲ್‌ಚುಕ್ ಶೂಟ್ ಮಾಡಿದ್ದ 243.6ರ ಗಡಿಯನ್ನು ದಾಟಿದರು. ಲಂಡನ್ ಮತ್ತು ಬೀಜಿಂಗ್ ಒಲಿಂಪಿಕ್ಸ್‌ನ ಫೈನಲಿಸ್ಟ್ ಆಗಿರುವ ಒಮೆಲ್‌ಚುಕ್, ಈ ಶೂಟಿಂಗ್ ಗುರಿಯನ್ನು 2018ರ ಆರಂಭದಲ್ಲಿ ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಸಾಧಿಸಿದ್ದರು. ಸೌರಭ್ ಅವರ ಈ ದಾಖಲೆಯನ್ನು ಅಧಿಕೃತ ಎಂದು ಪರಿಗಣಿಸಲಾಗುವುದಿಲ್ಲ ಎಂದು ವಿಶ್ವ ಶೂಟಿಂಗ್ ಮಂಡಳಿ ಹೇಳಿದೆ.
Next Story





