ಪ್ರವಾದಿ ನಿಂದನೆ : ಅಜಿತ್ ಹನುಮಕ್ಕನವರ್ ವಿರುದ್ಧ ವಿಟ್ಲ ಠಾಣೆಗೆ ದೂರು

ವಿಟ್ಲ, ಡಿ. 30: ಸುವರ್ಣ ನ್ಯೂಸ್ ಚಾನೆಲ್ ನ ಅಜಿತ್ ಹನುಮಕ್ಕನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಸ್ಕೆಎಸ್ಸೆಸ್ಸೆಫ್ ವಿಟ್ಲ ವಲಯ ಸಮಿತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದೆ.
ಈ ಸಂದರ್ಭ ನಿಯೋಗದಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷ ಖಾಸಿಂ ದಾರಿಮಿ, ವಿ.ಎಸ್ ಇಬ್ರಾಹಿಂ, ಪಟ್ಟಣ ಪಂಚಾಯತ್ ಸದಸ್ಯರಾದ ಸಮೀರ್ ಪಳಿಕೆ, ಹಕೀಂ ಪರ್ತಿಪಾಡಿ, ವಿಟ್ಲ ವಲಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಆಶ್ರಫ್ ಕಬಕ, ಕಾರ್ಯದರ್ಶಿ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್, ಇಬ್ರಾಹಿಂ ಫೈಝಿ, ವರ್ಕಿಂಗ್ ಕಾರ್ಯದರ್ಶಿ ಇಬ್ರಾಹಿಂ ಝೈನಿ, ಸಾಲೆತ್ತೂರು ಕ್ಲಸ್ಟರ್ ಕಾರ್ಯದರ್ಶಿ ಬಿ.ಎಂ. ಅಲಿ ಮುಸ್ಲಿಯಾರ್, ವಿಟ್ಲ ಕ್ಲಸ್ಟರ್ ವರ್ಕಿಂಗ್ ರ್ಕಾರ್ಯದರ್ಶಿ ಇಸ್ಮಾಯಿಲ್ ಹನಿಫಿ ಮಿದ್ಲಾಜ್ ಪರ್ತಿಪಾಡಿ ಹಾಗು ಇತರರು ಉಪಸ್ಥಿತರಿದ್ದರು.
Next Story