ಜ.2: ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಲೀಡರ್ಸ್ ಪಾರ್ಲಿಮೆಂಟ್
ಮಂಗಳೂರು, ಡಿ. 30: ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಲೀಡರ್ಸ್ ಪಾರ್ಲಿಮೆಂಟ್ ಕೌನ್ಸಿಲ್ ಮೀಟ್ ಹಾಗೂ ಶೈಖುನಾ ಅತ್ತಿಪಟ್ಟ ಉಸ್ತಾದ್ ಅವರ ಹೆಸರಲ್ಲಿ ಖತ್ಮುಲ್ ಖುರ್ಆನ್ ಮಜ್ಲಿಸ್ ಕಾರ್ಯಕ್ರಮ ಜ. 2ರಂದು ಲಯನ್ಸ್ ಕ್ಲಬ್ ಬಿ.ಸಿ.ರೋಡ್ ನಲ್ಲಿ ನಡೆಯಲಿದೆ.
ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಖತ್ಮುಲ್ ಖುರ್ಆನ್ ದುವಾ ಮಜ್ಲಿಸ್ ಗೆ ಜಿಲ್ಲಾ ಕೋಶಾಧಿಕಾರಿ ಸೈಯದ್ ಅಮೀರ್ ತಂಙಳ್ ಕಿನ್ಯ ನೇತೃತ್ವದಲ್ಲಿ ವಹಿಸಲಿದ್ದಾರೆ. ಸಭೆಯನ್ನು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಉದ್ಘಾಟಿಸಲ್ಲಿದ್ದು, 'ನಾವು ಮತ್ತು ನಮ್ಮ ಸಂಘಟನೆ' ವಿಷಯದಲ್ಲಿ ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸ್ವದಖತ್ತುಲ್ಲಾ ಫೈಝಿ ವಿಷಯ ಮಂಡಿಸಲ್ಲಿದ್ದಾರೆಂದು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ತಿಳಿಸಿದ್ದಾರೆ.
Next Story