ಆದಿತ್ಯನಾಥ್ ‘ಜಂಗಲ್ ರೂಲ್’ನಲ್ಲಿ ಯಾರೂ ಸುರಕ್ಷಿತವಲ್ಲ: ಕಾಂಗ್ರೆಸ್ ಟೀಕೆ
ಕಲ್ಲುತೂರಾಟಕ್ಕೆ ಪೊಲೀಸ್ ಪೇದೆ ಬಲಿ
ಲಕ್ನೋ, ಡಿ.30: ಗಾಝಿಪುರ ಹಿಂಸಾಚಾರದಲ್ಲಿ ಪೊಲೀಸ್ ಪೇದೆ ಮೃತಪಟ್ಟ ಬೆನ್ನಲ್ಲೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ "ಜಂಗಲ್ ರೂಲ್"ನಲ್ಲಿ ಯಾರೂ ಸುರಕ್ಷಿತವಾಗಿಲ್ಲ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.
"ಆದಿತ್ಯನಾಥ್ ಅವರ ಜಂಗಲ್ ರೂಲ್ ನಲ್ಲಿ ಜನರಾಗಲೀ, ಪೊಲೀಸರಾಗಲೀ ಸುರಕ್ಷಿತವಾಗಿಲ್ಲ" ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ. "ಇಂದು ಗಾಝಿಪುರದಲ್ಲಿ ಮೋದಿ ರ್ಯಾಲಿ ನಡೆದ ಬಳಿಕ ಉದ್ರಿಕ್ತರ ಗುಂಪು ನಿರ್ದಯವಾಗಿ ಪೊಲೀಸ್ ಪೇದೆ ಸುರೇಶ್ ವತ್ಸ್‍ರನ್ನು ಹತ್ಯೆ ಮಾಡಿದೆ" ಎಂದು ಹಿಂದಿಯಲ್ಲಿ ಅವರು ಟ್ವೀಟ್ ಮಾಡಿದ್ದಾರೆ.
ಪೊಲೀಸ್ ಪೇದೆ ಸುರೇಶ್ ವತ್ಸ್ (48) ಅವರು ಶನಿವಾರ ಪ್ರತಿಭಟನಾಕಾರರನ್ನು ಚದುರಿಸುವ ಪ್ರಯತ್ನದಲ್ಲಿದ್ದಾಗ ಕಲ್ಲು ತೂರಾಟಕ್ಕೆ ಬಲಿಯಾಗಿದ್ದರು. ಮೋದಿ ಸಭೆಗೆ ಆಗಮಿಸಿದ್ದ ಹಲವು ವಾಹನಗಳು ಉದ್ರಿಕ್ತರು ನಡೆಸಿದ ರಸ್ತೆ ತಡೆಯಲ್ಲಿ ಸಿಕ್ಕಿಹಾಕಿಕೊಂಡವು.
Next Story