ಕೊಲ್ಲರಕೋಡಿ: ರಕ್ತದಾನ ಶಿಬಿರ

ನರಿಂಗಾನ, ಡಿ.30: ಕೊಲ್ಲರಕೋಡಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ಕಾಸ್ಕ್) ನರಿಂಗಾನ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಇವರ ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಆದಿತ್ಯವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ದ. ಕ. ಜಿಲ್ಲಾ ಪಂಚಾಯತ್ ಶಾಲೆ ಕೊಲ್ಲರಕೋಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಲ್ಲರಕೋಡಿ ಶಾಲಾ ಅಧ್ಯಾಪಕರಾದ ವಸಂತ್ ವಹಿಸಿದ್ದರು. ಕಾಸ್ಕ್ ನರಿಂಗಾನ ಅಧ್ಯಕ್ಷ ಸಲಾಂ ಎಂ.ಎಚ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ವೆನ್ಲಾಕ್ ರಕ್ತನಿಧಿ ಮುಖ್ಯಸ್ಥರಾದ ಅಶೋಕ್, ಕಾಸ್ಕ್ ನರಿಂಗಾನ ಉಪಾದ್ಯಕ್ಷ ಅಶ್ರಫ್ ಎಸ್.ಎಚ್, ಮುಸ್ತಫಾ ಪಿ.ಎಂ, ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಕಾಸ್ಕ್ ನರಿಂಗಾನ ಕಾರ್ಯದರ್ಶಿ ಶಾಕೀರ್ ಎನ್.ಎಂ, ಹನೀಫ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 50 ಕ್ಕೂ ಅಧಿಕ ಉತ್ಸಾಹಿ ರಕ್ತದಾನಿಗಳು ಆಗಮಿಸಿ ರಕ್ತದಾನ ಮಾಡಿದರು.
ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯದರ್ಶಿ ನವಾಝ್ ಕೊಲ್ಲರಕೊಡಿ ವಂದನಾ ಕಾರ್ಯಕ್ರಮ ನೆರವೇರಿಸಿದರು.