ಪ್ರವಾದಿ ಬಗ್ಗೆ ನಿಂದಿನೆ: ಎಸ್ಕೆಎಸ್ ಬಿವಿ ಅಡ್ಡೂರು ವತಿಯಿಂದ ಖಂಡನಾ ಸಭೆ

ಅಡ್ಡೂರು, ಡಿ. 30: ಖಾಸಗಿ ಸುದ್ದಿ ವಾಹಿನಿಯೊಂದು ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಿರೂಪಕ, ವಿಚಾರವಾದಿ ಪ್ರೊ. ಭಗವಾನ್ ಹೇಳಿಕೆ ಕುರಿತು ವಿಶ್ಲೇಷಿಸುವ ಭರದಲ್ಲಿ ಪ್ರವಾದಿ ಮುಹಮ್ಮದ್ (ಸ)ರನ್ನು ನಿಂದಿಸಿರುವ ಬಗ್ಗೆ ಎಸ್ಕೆಎಸ್ ಬಿವಿ ವತಿಯಿಂದ ಇಲ್ಲಿನ ಅಲ್ ಮದ್ರಸತುಲ್ ಬದ್ರಿಯಾ ವಠಾರದಲ್ಲಿ ರವಿವಾರ ಖಂಡನಾ ಸಭೆ ನಡೆಯಿತು.
ಬದ್ರಿಯಾ ಜುಮಾ ಮಸೀದಿಯ ಖತೀಬ್ ಕೆ.ಎಂ.ಶರೀಫ್ ದುವಾಶೀರ್ವಚನ ನೀಡಿದರು. ಬಳಿಕ ಮದ್ರಸ ಸದ್‌ರ್ ಮುಅಲ್ಲಿಂ ಬಿ.ಎಚ್. ಮುಹಮ್ಮದ್ ಮುಸ್ತಫಾ ಹನೀಫಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಮದ್ರಸ ವಿದ್ಯಾರ್ಥಿಗಳು ಕೈಯಲ್ಲಿ ಭಿತ್ತಿ ಪತ್ರ ಹಿಡಿದು ನಿರೂಪಕನ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಭೆಯಲ್ಲಿ ಮದ್ರಸ ಮ್ಯಾನೆಜ್ ಮೆಂಟ್ ಅಧ್ಯಕ್ಷ ಡಿ.ಎಸ್.ರಫೀಕ್, ಬದ್ರಿಯಾ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಟಿ.ಸೈಯ್ಯದ್ ತೋಕೂರು, ಉಪಾಧ್ಯಕ್ಷ ಅಹ್ಮದ್ ಬಾವಾ ಅಂಗಡಿ ಮನೆ, ಎಸ್ಕೆಎಸ್ಸೆಸೆಫ್ ನ ಅಕ್ಬರ್, ಅಹ್ಮದ್ ಬಾವಾ ಟಿಬೇಟ್, ಸೆಂಟ್ರಲ್ ಕಮಿಟಿಯ ಅನ್ವರ್ ಗೋಳಿಪಡ್ಪು, ಮದ್ರಸ ಉಪನ್ಯಾಸಕರಾದ ಹಮೀದ್ ಉಸ್ತಾದ್, ಹೈದರ್ ದಾರಿಮಿ, ಶರೀಫ್ ದಾರಿಮಿ, ಅಬೂಬಕರ್ ಮೌಲವಿ, ಉಸ್ಮಾನ್ ಮೌಲವಿ, ಹನೀಫ್ ಮೌಲವಿ, ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.