Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. 2019 ಆಕಾಶ ವೀಕ್ಷಕರಿಗೆ ಆಶಾದಾಯಕ ವರ್ಷ:...

2019 ಆಕಾಶ ವೀಕ್ಷಕರಿಗೆ ಆಶಾದಾಯಕ ವರ್ಷ: ಡಾ.ಎ.ಪಿ.ಭಟ್

ವಾರ್ತಾಭಾರತಿವಾರ್ತಾಭಾರತಿ30 Dec 2018 8:51 PM IST
share
2019 ಆಕಾಶ ವೀಕ್ಷಕರಿಗೆ ಆಶಾದಾಯಕ ವರ್ಷ: ಡಾ.ಎ.ಪಿ.ಭಟ್

ಉಡುಪಿ, ಡಿ.30: ಆಕಾಶ ವೀಕ್ಷರಿಗೆ ಹಾಗೂ ಆಕಾಶಕಾಯಗಳ ಆಸಕ್ತರಿಗೆ 2019 ತುಂಬಾ ಆಶಾದಾಯಕವಾದ ವರ್ಷವಾಗಿರುತ್ತದೆ. ಪ್ರತೀ ವರ್ಷದಂತೆ 2019 ರಲ್ಲೂ ಗ್ರಹಣಗಳು, ಉಲ್ಕಾಪಾತಗಳು, ಸೂಪರ್ ಮೂನ್‌ಗಳು, ಮೈಕ್ರೋಮೂನ್‌ಗಳು, ಗ್ರಹಗಳು, ನಕ್ಷತ್ರಗಳು ಹಾಗೂ ಅವುಗಳ ಸೊಬಗು ಭವ್ಯವಾಗಿರುವುದು ಈ ವರ್ಷದ ಒಂದು ವಿಶೇಷ ಎಂದು ಉಡುಪಿ ಪೂರ್ಣಪ್ರಜ್ಞ ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪೂರ್ಣಪ್ರಜ್ಞ ಅಮೆಚೂರು ಆಸ್ಟ್ರೋನೋಮರ್ಸ್‌ ಕ್ಲಬ್‌ನ ಸಂಚಾಲಕ ಡಾ.ಎ.ಪಿ.ಭಟ್  ತಿಳಿಸಿದ್ದಾರೆ.

ಕಂಕಣ ಸೂರ್ಯಗ್ರಹಣ: ಮುಂದಿನ ಡಿಸೆಂಬರ್ 26ರಂದು ದಕ್ಷಿಣ ಭಾರತೀಯರಿಗೆ ಬಲು ಅಪರೂಪದ ಕಂಕಣ ಸೂರ್ಯಗ್ರಹಣ ಕಾಣಿಸಲಿದೆ. ಈ ಹಿಂದೆ 1980ರಲ್ಲಿ ನಮಗೆ ಕಂಕಣ ಸೂರ್ಯಗ್ರಹಣ ನೋಡುವ ಭಾಗ್ಯ ಲಭಿಸಿತ್ತು. ಇನ್ನು ಮುಂದೆ ದಕ್ಷಿಣ ಭಾರತೀಯರಿಗೆ ಖಗ್ರಾಸ ಸೂರ್ಯಗ್ರಹಣ ಕಾಣಲು ಸಿಗುವುದು 2064ಕ್ಕೆ.

ವರ್ಷದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಸೇರಿ ಸರಿ ಸುಮಾರು 4 ರಿಂದ 7 ಗ್ರಹಣಗಳು ಸಂಭವಿಸುತ್ತವೆ. 2019ರಲ್ಲಿ 5 ಗ್ರಹಣಗಳು ಸಂಭವಿ ಸಲಿವೆಯಾದರೂ ಭಾರತಕ್ಕೆ ಪಾಲಿಗಿರುವುದು ಎರಡು ಮಾತ್ರ. ಜುಲೈ 16 ರಂದು ಖಂಡಗ್ರಾಸ ಚಂದ್ರಗ್ರಹಣ ಹಾಗೂ ಡಿಸೆಂಬರ್ 26 ರಂದು ಕಂಕಣ ಸೂರ್ಯಗ್ರಹಣ ಮಾತ್ರ.

ಜನವರಿ 6ರ ಪಾರ್ಶ್ವ ಸೂರ್ಯಗ್ರಹಣ, ಜನವರಿ 21ರ ಖಗ್ರಾಸ ಚಂದ್ರ ಗ್ರಹಣ, ಜೂನ್ 2ರ ಖಗ್ರಾಸ ಸೂರ್ಯಗ್ರಹಣ ಭಾರತದಲ್ಲಿ ಕಾಣಿಸಿ ಕೊಳ್ಳುವುದಿಲ್ಲ. 2020ರಿಂದ 2064ರವರೆಗೆ 6 ಪಾರ್ಶ್ವ ಸೂರ್ಯಗ್ರಹಣ ಭಾರತಕ್ಕಿದ್ದರೂ ಖಗ್ರಾಸ ಸೂರ್ಯಗ್ರಹಣ 2064ಕ್ಕೆ ಮಾತ್ರ ಭಾರತದಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ವರ್ಷದ ಕಂಕಣ ಸೂರ್ಯಗ್ರಹಣ ದಕ್ಷಿಣ ಭಾರತದ ವಿಜ್ಞಾನಿಗಳಿಗೆ ಹಾಗೂ ಖಗೋಳ ಆಸಕ್ತರಿಗೆ ಸಿಗುವ ವಿಶೇಷ ಅವಕಾಶ ವಾಗಿದೆ.

ಸೂಪರ್‌ಮೂನ್ ಹಾಗೂ ಮೈಕ್ರೋಮೂನ್‌ಗಳು ಪ್ರತಿ ತಿಂಗಳಲ್ಲೂ ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಸಂಭವಿಸುತ್ತದೆಯಾದರೂ ವರ್ಷದಲ್ಲಿ ಕೆಲ ಹುಣ್ಣಿಮೆ ಭವ್ಯವಾಗಿರುತ್ತದೆ. ತನ್ನ ದೀರ್ಘ ವೃತ್ತದ ಅಕ್ಷದಲ್ಲಿ ಭೂಮಿಗೆ ಸುತ್ತುವ ಚಂದ್ರ ಕೆಲ ಹುಣ್ಣಿಮೆಗಳಲ್ಲಿ ಭೂಮಿಗೆ ಸಮೀಪ ಬರುವುದಿದೆ. ಆಗ ಸುಮಾರು 14 ಅಂಶ ದೊಡ್ಡದಾಗಿ ಗೋಚರಿಸಿ, 24 ಅಂಶ ಹೆಚ್ಚಿನ ಪ್ರಭೆಯಲ್ಲಿ ಗೋಚರಿಸುತ್ತಾನೆ. ಈ ಹುಣ್ಣಿಮೆಗಳಿಗೆ ಸೂಪರ್‌ಮೂನ್‌ಗಳೆಂದು ಕರೆಯಲಾಗುತ್ತದೆ.

ಈ ವರ್ಷ ಜನವರಿ 21ರಂದು (3,57,715 ಕಿ.ಮೀ), ಫೆಬ್ರವರಿ 19ರಂದು (3,56,846ಕಿ.ಮೀ) ಹಾಗೂ ಮಾರ್ಚ್ 21ರಂದು (3,60,772ಕಿ.ಮೀ) ಸೂಪರ್ ಮೂನ್‌ಗಳಿರುತ್ತವೆ. ಭೂಮಿ ಮತ್ತು ಚಂದ್ರರ ಸರಾಸರಿ ದೂರ 3,84,000ಕಿ.ಮೀ.ಗಳಾಗಿದ್ದು, ಅದೇ ಧೀರ್ಘ ವೃತ್ತದಲ್ಲಿ ಕೆಲವೊಮ್ಮೆ ದೂರದಲ್ಲಿದ್ದಾಗ ಹುಣ್ಣಿಮೆಯಾದರೆ, ಈ ಹುಣ್ಣಿಮೆ ಚಂದ್ರ ಮಾಮೂಲಿಗಿಂತ ಚಿಕ್ಕದಾಗಿ ಕಾಣುತ್ತಾನೆ. ಈ ಹುಣ್ಣಿಮೆಗೆ ಮೈಕ್ರೋಮೂನ್ ಎಂದು ಕರೆಯಲಾಗುತ್ತದೆ. ಈ ವರ್ಷದ ಸೆಪ್ಟಂಬರ್ 14ರ ಹುಣ್ಣಿಮೆ ಮೈಕ್ರೋಮೂನ್ (4,06,377ಕಿ.ಮೀ) ಆಗಿರುತ್ತದೆ.

ಉಲ್ಕಾಪಾತಗಳು

2019ರಲ್ಲಿ ಸುಮಾರು 12ಕ್ಕಿಂತ ಹೆಚ್ಚು ಪ್ರಮುಖ ಉಲ್ಕಾಪಾತಗಳಾದರೂ, ಅವುಗಳ ಸೌಂದರ್ಯ ವೀಕ್ಷಣೆಗೆ ಚಂದ್ರನಿಲ್ಲದ ಆಕಾಶ ಬೇಕು. ಈ ವರ್ಷದ ಜನವರಿ 3 ಮತ್ತು 4 ರಂದು ಕಾಣುವ ಕ್ವಾಡರ್ನಟಿಡ್ ಉಲ್ಕಾಪಾತ ಹಾಗೂ ಮೇ 6-7ರ ಕುಂಭರಾಶಿಯಿಂದ ಕಾಣುವ ಈಟಾ ಅಕ್ವೇರಿಯಸ್ ಉಲ್ಕಾಪಾತವನ್ನು ಮಧ್ಯರಾತ್ರಿಯ ನಂತರ ನೋಡಿ ಖುಷಿಪಡಬಹುದು.

ಬರಿಯ ಕಣ್ಣಿಗೆ ಕಾಣುವ ಬುಧ, ಶುಕ್ರ, ಮಂಗಳ, ಗುರು ಹಾಗೂ ಶನಿಗ್ರಹಗಳು ಸುಂದರವಾಗಿ ಕಾಣುವುದು ಕೆಲ ಸಮಯ ಮಾತ್ರ. ಬುಧಗ್ರಹ ಕಾಣ ಸಿಗುವುದೇ ಬಲು ಅಪರೂಪ. ವರ್ಷದಲ್ಲಿ ಮೂರು ಬಾರಿ ಸೂರ್ಯಸ್ತವಾದೊಡನೆ ಪಶ್ಚಿಮ ಆಕಾಶದಲ್ಲಿ ಹಾಗೂ ಮೂರು ಬಾರಿ ಸೂರ್ಯೋದಯಕ್ಕಿಂತ ಮುಂಚೆ ಮೂರು ಬಾರಿ ಮಾತ್ರ. ಅದೂ ಕೇವಲ 45 ನಿಮಿಷಗಳ ಕಾಲ.

ಈ ವರ್ಷ ಸಂಜೆ ಆಕಾಶದಲ್ಲಿ ಫೆಬ್ರವರಿ 27 (18 ಡಿಗ್ರಿ), ಜೂನ್ 23ರಂದು (25.5 ಡಿಗ್ರಿ) ಹಾಗೂ ಅಕ್ಟೋಬರ್ 20ರಂದು (24.6 ಡಿಗ್ರಿ), ಅದೇ ರೀತಿ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮುನ್ನ ಎಪ್ರಿಲ್11 (27.7 ಡಿಗ್ರಿ), ಆಗಸ್ಟ್ 9 (19 ಡಿಗ್ರಿ) ಮತ್ತು ನ. 28ರಂದು ಕಾಣಿಸಿಕೊಳ್ಳುತ್ತದೆ.

ಶುಕ್ರಗ್ರಹ

ವರ್ಷದಲ್ಲಿ ಸುಮಾರು 6 ತಿಂಗಳು ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಹಾಗೂ 6 ತಿಂಗಳು ಪಶ್ಚಿಮ ಆಕಾಶದಲ್ಲಿ ಸಂಜೆ ಆಕಾಶದಲ್ಲಿ ಹೊಳೆವ ಸುಂದರ ಗ್ರಹ ಶುಕ್ರ.ಈ ವರ್ಷ ಜುಲೈ 23ರವರೆಗೆ ಬೆಳ್ಳಿಗೆ ಪೂರ್ವ ಆಕಾಶದಲ್ಲಿ ಹಾಗೂ ಸಪ್ಟಂಬರ್ 18ರಿಂದ ಪಶ್ಚಿಮ ಆಕಾಶದಲ್ಲಿ (ಸಂಜೆ) ಕಾಣಿಸಲಿದ್ದಾನೆ. ಜನವರಿ 6ರಂದು ಪೂರ್ವ ಆಕಾಶದಲ್ಲಿ ಅತೀ ಎತ್ತರ 47 ಡಿಗ್ರಿಯಲ್ಲಿ ಕಾಣಿಸಲಿದೆ.

ಮಂಗಳಗ್ರಹ

ಈ ವರ್ಷದ ಜೂನ್‌ವರೆಗೂ ಸಂಜೆ ಆಕಾಶದಲ್ಲಿ ನಡುನೆತ್ತಿಯಿಂದ ಪೂರ್ವಕ್ಕೆ ಕಾಣಿಸುವ ಮಂಗಳ ಗ್ರಹ, ಆಗಸ್ಟ್ ನಿಂದ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣಿಸುವುದು.

ಗುರುಗ್ರಹ

ವರ್ಷದಲ್ಲಿ ಒಂದು ತಿಂಗಳು ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಇಡೀ ರಾತ್ರಿ ಕಾಣುವುದು ಜೂನ್‌ನಲ್ಲಿ. ಆಗ ದೂರದರ್ಶಕದಲ್ಲಿ ಗುರುಗ್ರಹದ ಮೇಲ್ಮೈ ಹಾಗೂ ಅದರ ಚಂದ್ರರು ಅತೀ ಸೊಬಗಿನಿಂದ ಕಾಣಿಸಿಕೊಳ್ಳಲಿವೆ. ಅಲ್ಲಿಯವರೆಗೆ ಬೆಳಗಿನ ಆಕಾಶದಲ್ಲಿ ಕಾಣಿಸಿದರೆ, ಜೂನ್ ನಂತರ ಸಂಜೆ ಆಕಾಶದಲ್ಲಿ ಪೂರ್ವ ದಿಕ್ಕಿನಲ್ಲಿ ಬರಲಿದೆ.

ಮಂಗಳಗ್ರಹ

ಈ ವರ್ಷದ ಜೂನ್‌ವರೆಗೂ ಸಂಜೆ ಆಕಾಶದಲ್ಲಿ ನಡುನೆತ್ತಿಯಿಂದ ಪೂರ್ವಕ್ಕೆ ಕಾಣಿಸುವ ಮಂಗಳ ಗ್ರಹ, ಆಗಸ್ಟ್ ನಿಂದ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣಿಸುವರು.

ಗುರುಗ್ರಹ

ವರ್ಷದಲ್ಲಿ ಒಂದು ತಿಂಗಳು ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಇಡೀ ರಾತ್ರಿ ಕಾಣುವುದು ಜೂನ್‌ನಲ್ಲಿ. ಆಗ ದೂರದರ್ಶಕದಲ್ಲಿ ಗುರು ಗ್ರಹದ ಮೇಲ್ಮೆ  ಅತೀ ಸೊಬಗಿನಿಂದ ಕಾಣಿಸಿಕೊಳ್ಳಲಿವೆ. ಅಲ್ಲಿಯವರೆಗೆ ಬೆಳಗಿನ ಆಕಾಶದಲ್ಲಿ ಕಾಣಿಸಿದರೆ, ಜೂನ್ ನಂತರ ಸಂಜೆ ಆಕಾಶದಲ್ಲಿ ಪೂರ್ವ ದಿಕ್ಕಿನಲ್ಲಿ ಬರಲಿದೆ.

ಶನಿಗ್ರಹ

ವರ್ಷದಲ್ಲಿ ಒಂದು ತಿಂಗಳು ಭೂಮಿಗೆ ಸಮೀಪ ಬಂದು ದೊಡ್ಡದಾಗಿ ಕಾಣುವುದು ಜುಲೈಯಲ್ಲಿ. ಆಗ ಶನಿಯ ಬಳೆಗಳು ದೂರದರ್ಶಕ ದಲ್ಲಿ ಅತಿ ಸುಂದರವಾಗಿ ಗೋಚರಿಸಲಿದೆ. ಅಲ್ಲಿಯವರೆಗೆ ಬೆಳಗಿನ ಆಕಾಶದಲ್ಲಿ ಪೂರ್ವದಲ್ಲಿ ಕಂಡರೆ, ಜುಲೈ ನಂತರ ಸಂಜೆ ಪೂರ್ವ ಆಕಾಶದಲ್ಲಿ ಕಾಣುವುದು.

ಇನ್ನು ಅಮಾವಾಸ್ಯೆಯ ಸಮೀಪ ನಕ್ಷತ್ರ ಪುಂಜಗಳು, ನಕ್ಷತ್ರಗುಚ್ಚಗಳು, ಆಕಾಶ ಗಂಗೆಗಳನ್ನು ನೋಡಲು ತುಂಬಾ ಅವಕಾಶಗಳಿವೆ. ಚಂದ್ರನಿಲ್ಲದ ರಾತ್ರಿಯಲ್ಲಿ ಆಕಾಶದಲ್ಲಿ ಇವೆಲ್ಲವುಗಳ ಸೊಬಗನ್ನು ಆಸಕ್ತರು ಧಾರಾಳವಾಗಿ ಸವಿಯಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X