ಕಾಪು: ಕೊಂಬಗುಡ್ಡೆ ಜಾಮಿಯ ಮಸೀದಿ ರಸ್ತೆಯ ಕಾಂಕ್ರಿಟ್ ಕಾಮಗಾರಿ ಉದ್ಘಾಟನೆ

ಕಾಪು, ಡಿ.30: ಕಾಪು ಪುರಸಭಾ ವ್ಯಾಪ್ತಿಯ 17ನೇ ಬಡಗರ ಗುತ್ತು ವಾರ್ಡ್ ಕೊಂಬಗುಡ್ಡೆ ಜಾಮಿಯ ಮಸೀದಿ ರಸ್ತೆಯ ಕಾಂಕ್ರಿಟ್ ಕಾಮಗಾರಿಯನ್ನು ಉದ್ಘಾಟಿಸಲಾಯಿತು.
ಅಬ್ಕೋ ಕಂಪೆನಿಯ ಮಾಲಕ ಮುಹಮ್ಮದ್ ಅಸ್ಲಮ್ ಕಾಝಿ ಉದ್ಘಾಟಿಸಿದರು. ಮೌಲಾನಾ ಅಬ್ದುರ್ರಶೀದ್ ದುಆ ನೆರವೇರಿಸಿದರು. ಕಾಪು ಪುರಸಭೆ ಕೈಗೊಂಡಿರುವ ಈ ಯೋಜನೆಯ ಬಾಕಿ ಉಳಿದ ಸುಮಾರು 30 ಮೀ. ಕಾಮಗಾರಿಗೆ 1.5 ಲಕ್ಷ ರೂ. ವೆಚ್ಚವನ್ನು ಅಸ್ಲಮ್ ಕಾಝಿ ವಿನಿಯೋಗಿಸಿದರು.
ಈ ಸಂದರ್ಭದಲ್ಲಿ ಹಲೀಮಾ ಸಾಬ್ಜು ಟ್ರಸ್ಟ್ ಡೈರೆಕ್ಟರ್ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಉದ್ಯಾವರ, ಕಾಪು ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಶಭಿ ಅಹ್ಮದ್ ಕಾಝಿ, ಕಾಪು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುಹಮ್ಮದ್ ಸಾದಿಕ್ ಸಾಹೇಬ್ , ಕಾಪು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ, ಜಮಾಅತೆ ಇಸ್ಲಾಮಿ ಹಿಂದ್ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು, ಕಾಪು ಮುಸ್ಲಿಮ್ ಒಕ್ಕೂಟ ಕಾರ್ಯದರ್ಶಿ ನಾಸಿರ್ ಎಕ್ಕಾವನ್, ಉದ್ಯಮಿಗಳಾದ ನಝೀರ್ ಅ. ಸತ್ತಾರ್, ಸಿರಾಜುದ್ದೀನ್ ಕಾಝಿ, ಸುಲೈಮಾನ್ ದಾವೂದ್, ಅಬ್ದುಲ್ ಶುಕೂರ್, ಮುಹಮ್ಮದ್ ಶಾಬಾನ್, ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರು, ಪಿಡಬ್ಲ್ಯೂಡಿ ಗುತ್ತಿಗೆದಾರರಾದ ಸುಜನ್ ಜೆ.ವಿ. ಕಲ್ಯಾ, ಅಬ್ದುಲ್ ಸತ್ತಾರ್ ಉದ್ಯಾವರ ಹಾಗು ಇತರರು ಉಪಸ್ಥಿತರಿದ್ದರು.