ಪಬ್ಲಿಸಿಟಿಯ ಹಂಗಿಲ್ಲದ ಮನಮೋಹನ್ ಸಿಂಗ್ ‘ವಿಶ್ವದ ಅತ್ಯುತ್ತಮ ಪ್ರಧಾನಿ’: ಶಂಕರ್ ಸಿನ್ಹ ವಘೇಲಾ
ಹೊಸದಿಲ್ಲಿ, ಡಿ.30: ಪ್ರಚಾರವಿಲ್ಲದೆ ದೇಶಕ್ಕಾಗಿ ಕೆಲಸ ಮಾಡಿದ ಮನಮೋಹನ್ ಸಿಂಗ್ ‘ವಿಶ್ವದ ಅತ್ಯುತ್ತಮ ಪ್ರಧಾನಿ’ ಎಂದು ಗುಜರಾತ್ ಕಾಂಗ್ರೆಸ್ ನ ಮಾಜಿ ನಾಯಕ ಶಂಕರ್ ಸಿನ್ಹ ವಘೇಲಾ ಹೇಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪ್ರತಿಮೆ ನಿರ್ಮಾಣ ಮತ್ತು ಸ್ವಯಂ ಪ್ರಚಾರಕ್ಕಾಗಿ ಮೋದಿ ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ ಎಂದು ಹೇಳಿದರು.
“ಒಬಿಸಿ ಸಮುದಾಯಕ್ಕೆ ಈ ಕೇಂದ್ರ ಸರಕಾರ ಕೇವಲ 1800 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಇದರ್ಥವೇನು? ನೀವು 5000 ಕೋಟಿ ರೂ.ಗಳಿಗಿಂತಲೂ ಹೆಚ್ಚು ಜಾಹೀರಾತುಗಳಿಗೆ ಖರ್ಚು ಮಾಡುತ್ತೀರಿ. ಆದರೆ ಸಮುದಾಯಕ್ಕೇಕೆ ನೀಡುತ್ತಿಲ್ಲ?” ಎಂದವರು ಪ್ರಶ್ನಿಸಿದರು.
Next Story