ಬಾಂಗ್ಲಾದೇಶ ಚುನಾವಣೆ: ಶೇಖ್ ಹಸೀನಾರ ಅವಾಮಿ ಲೀಗ್ ಗೆ ಭರ್ಜರಿ ಮುನ್ನಡೆ

ಹೊಸದಿಲ್ಲಿ, ಡಿ.30: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಶೇಖ್ ಹಸೀನಾರ ಅವಾಮಿ ಲೀಗ್ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಜಯದತ್ತ ಮುನ್ನುಗ್ಗುತ್ತಿದೆ. ಅವಾಮಿ ಲೀಗ್ 54 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಜಾಟಿಯೋ ಒಯ್ಕ್ಯಾ ಫ್ರಂಟ್ 1 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.
ಇದೇ ಸಂದರ್ಭ ಹಲವೆಡೆಗಳಲ್ಲಿ ನಡೆದ ಘರ್ಷಣೆಗಳಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೇರಿದೆ.
Next Story





