ನಿರೂಪಕನಿಂದ ಪ್ರವಾದಿ ನಿಂದನೆ: ಸೂಕ್ತ ಕ್ರಮಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ದೂರು

ಮಂಗಳೂರು, ಡಿ.30: ಪ್ರವಾದಿ ಮುಹಮ್ಮದ್ (ಸ)ರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಖಾಸಗಿ ಸುದ್ದಿವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕ್ರಮ ಜರಗಿಸಬೇಕೆಂದು ಉಳ್ಳಾಲ ಠಾಣೆಯ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರಿಗೆ ವಿವಿಧ ಸಂಘಟನೆಗಳಿಂದ ರವಿವಾರ ಮನವಿ ಸಲ್ಲಿಸಲಾಯಿತು.
ಉಳ್ಳಾಲದ ಸಫರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್, ಅಳೇಕಲ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್, ಸುಲ್ತಾನ್ ಸ್ಪೋಟ್ಸ್ ಕ್ಲಬ್ ಮತ್ತು ಕಲ್ಚರಲ್ ಅಸೋಸಿಯೇಶನ್, ಬಿ.ಬಾಯ್ಸ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅಳೇಕಲ, ಸೆಂಟ್ರಲ್ ಕಮಿಟಿ ಉಳ್ಳಾಲ, ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಳೇಕಲ, ಯುನೈಟೆಡ್ ಚಾರಿಟೇಬಲ್ ಟ್ರಸ್ಟ್ ಮಾರ್ಗತಲೆ, ಮಂಚಿಲ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಉಳ್ಳಾಲದ ಎಂಟು ಸಂಘ ಸಂಸ್ಥೆಯಿಂದ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದೇಶದ ಕಾನೂನಿನ, ಪ್ರಜಾಪ್ರಭುತ್ವದ, ಸಂವಿಧಾನದ ಬಗ್ಗೆ ಅಪಾರ ಗೌರವ ಇದೆ. ವಿಶೇಷವಾಗಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಈ ನಿಟ್ಟಿನಲ್ಲಿ ನಮ್ಮ ಮನಸ್ಸಿಗೆ ಆದ ನೋವಿಗೆ ಕಾನೂನಿನ ರೂಪದಲ್ಲಿ ನಮಗೆ ಮದ್ದು ಸಿಗಬಹುದೆಂದು ಮತ್ತು ಮನಸ್ಸಿಗೆ ಶಮನ ಕೊಡಬಹು ದೆಂಬ ದೃಷ್ಟಿಯಲ್ಲಿ ದೂರು ನೀಡಿದ್ದೇವೆ ಎಂದು ಉಳ್ಳಾಲ ನಗರ ಸಭಾ ಸದಸ್ಯ ಅಯ್ಯುಬ್ ಯು.ಪಿ.ಮಂಚಿಲ ಹೇಳಿದರು.
ಸಫರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ನಝೀರ್ ಹುಸೈನ್, ಸದಸ್ಯರಾದ ಯು.ಎಚ್.ಫತಾಕ್, ಅಬ್ದುರ್ರಹ್ಮಾನ್, ಅಳೇಕಲ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಫಾರೂಕ್, ಸದಸ್ಯರಾದ ಬದ್ರುದ್ದೀನ್, ಯು.ಎಸ್.ಫಾರೂಕ್, ಸುಲ್ತಾನ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಯು.ಕೆ.ಸದಕತುಲ್ಲಾ, ಸದಸ್ಯರಾದ ಹೈದರ್, ರಾಫೀಝ್, ಬಿ.ಬಾಯ್ಸ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅಳೇಕಲ ಅಧ್ಯಕ್ಷ ಮುಹಮ್ಮದ್ ಹನೀಫ್, ಸದಸ್ಯರಾದ ಮುಹಮ್ಮದ್ ಕಬೀರ್, ಮುಹಮ್ಮದ್ ರಫೀಕ್, ರಿಯಾಝ್, ಇರ್ಷಾದ್, ಸೆಂಟ್ರಲ್ ಕಮಿಟಿ ಉಳ್ಳಾಲ ಕಾರ್ಯದರ್ಶಿ ಯು.ಕೆ ಮುಹಮ್ಮದ್ ಮುಸ್ತಫ, ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಳೇಕಲ ಕಾರ್ಯದರ್ಶಿ ಕೆ.ಎನ್. ಮುಹಮ್ಮದ್, ಸದಸ್ಯರಾದ ಇಬ್ರಾಹೀಂ ಹಾಜಿ ಕಕ್ಕೆತೋಟ, ಯುನೈಟೆಡ್ ಚಾರಿಟೇಬಲ್ ಟ್ರಸ್ಟ್ ಮಾರ್ಗತಲೆ ಅಧ್ಯಕ್ಷ ಮುಹಮ್ಮದ್ ಆಸಿಫ್, ಉಪಾಧ್ಯಕ್ಷ ಮುಹಮ್ಮದ್ ಮುಸ್ತಫ, ಸದಸ್ಯರಾದ ಮುಹಮ್ಮದ್ ಸಾದಿಕ್, ಇಕ್ಬಾಲ್, ನೌಶಾದ್, ಮಂಚಿಲ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಎನ್.ಹಸನಬ್ಬ, ಕಾರ್ಯದರ್ಶಿ ಯು.ಎಂ.ಇಸ್ಮಾಯೀಲ್, ಕೋಡಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್, ಶರೀಪ್ ಕೋಡಿ ಮೊದಲಾದವರು ಉಪಸ್ಥಿತರಿದ್ದರು.