ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೂತನ ದ.ಕ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಸಾದಿಕ್ ಆಯ್ಕೆ

ಮಂಗಳೂರು, ಡಿ. 30: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ ಕ ಜಿಲ್ಲೆಯ 2018-20 ನೇ ಅವಧಿಗೆ ನೂತನ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಸಾದಿಕ್ ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಆಯ್ಕೆಯಾಗಿದ್ದಾರೆ.
ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಸಭಾಭವನದಲ್ಲಿ ನಡೆದ ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.ರಾಜ್ಯ ಸಮಿತಿ ಸದಸ್ಯರುಗಳಾದ ಅಡ್ವೊಕೇಟ್ ಸುಫಿಯಾನ್ ಮಡಿಕೇರಿ ಹಾಗೂ ಅಶ್ವಾನ್ ಸಾದಿಕ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಮಹಮ್ಮದ್ ಸಾದಿಕ್ ಮಂಗಳೂರಿನ ಡಾ. ಎಮ್.ವಿ.ಶೆಟ್ಟಿ ಕಾಲೇಜಿನಲ್ಲಿ ಬಿ.ಎಸ್ಸಿ (ಎಮ್.ಎಲ್.ಟಿ) ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ ಹಾಗೂ ನಿಝಾಮುದ್ದೀನ್ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಮ್.ಕಾಂ(ಎಚ್.ಆರ್.ಡಿ) ಸ್ನಾತಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ.
ಇದೇ ವೇಳೆ ಉಪಾಧ್ಯಕ್ಷರುಗಳಾಗಿ ನೌಫಲ್ ವಝೀರ್ ಹಾಗೂ ಮುರ್ಶಿದಾ, ಜೊತೆ ಕಾರ್ಯದರ್ಶಿಗಳಾಗಿ ತಾಜುದ್ದೀನ್ ಹಾಗೂ ಸುಹೈನಾ, ಕೋಶಾಧಿಕಾರಿಯಾಗಿ ಅಬ್ದುಲ್ ಬಾಸಿತ್,ಸಮಿತಿ ಸದಸ್ಯರುಗಳಾಗಿ ಸಾಹುಲ್ ಕೊಣಾಜೆ,ಫಹದ್ ಅನ್ವರ್, ಸಫಾ ಕಾಟಿಪಳ್ಳ ಮತ್ತು ಸಫ್ರೀನಾ ಆಯ್ಕೆಗೊಂಡರು.
ಜಿಲ್ಲಾ ಕಾರ್ಯದರ್ಶಿಗಳಾಗಿದ್ದ ಮಹಮ್ಮದ್ ಸಾದಿಕ್ 2 ವರ್ಷಗಳ ಸಂಘಟನೆಯ ಕಾರ್ಯಚಟುವಟಿಕೆಯ ವರದಿ ವಾಚಿಸಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಇಮ್ರಾನ್ ಪಿ.ಜೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಮುರ್ಶಿದಾ ವಂದಿಸಿದರು. ಫಹದ್ ಅನ್ವರ್ ಕಾರ್ಯಕ್ರಮ ನಿರೂಪಿಸಿದರು.