ಮೋದಿ ಬಗ್ಗೆ ಚಿತ್ರ ನಿರ್ಮಾಣಕ್ಕೆ ಜಿಗ್ನೇಶ್ ಮೇವಾನಿ ಚಿಂತನೆ: ಈ ಸಿನೆಮಾ ಹೆಸರೇನು ಗೊತ್ತಾ?
ಹೊಸದಿಲ್ಲಿ, ಡಿ. 29: ತಾನು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಿನೆಮಾ ನಿರ್ಮಿಸಲಿದ್ದೇನೆ. ಅದಕ್ಕೆ ‘ಚೌಕಿದಾರ್ ಹಿ ಚೋರ್ ಹೈ’ ಹೆಸರಿಡಲು ಬಯಸಿದ್ದೇನೆ ಎಂದು ಗುಜರಾತ್ ನ ಶಾಸಕ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿನಾಶಕಾರಿ ಪ್ರಧಾನಿ’ ಎಂದು ಕರೆದಿರುವ ಅವರು, ಈ ಚಿತ್ರದಲ್ಲಿ ಬಿಜೆಪಿಯ ಅಭಿವೃದ್ಧಿಯ ಪೊಳ್ಳುತನವನ್ನು ಬಯಲಿಗೆಳೆಯುವುದಾಗಿ ಹೇಳಿದ್ದಾರೆ.
‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ರೀತಿಯಲ್ಲೇ ನರೇಂದ್ರ ಮೋದಿ ಅವರ ಕುರಿತು ಸಿನೆಮಾ ನಿರ್ಮಾಣ ಮಾಡಿದರೆ, ಅದು ಶಾರುಕ್ ಖಾನ್, ಸಲ್ಮಾನ್ ಖಾನ್ ಅಥವಾ ಅಮೀರ್ ಖಾನ್ ನಟನೆಯ ಬ್ಲಾಕ್ ಬಸ್ಟರ್ ಚಿತ್ರಕ್ಕಿಂತ ಹೆಚ್ಚು ಹಣ ಸಂಪಾದಿಸಬಹುದು ಎಂದು ಅವರು ಹೇಳಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪು ವಿರೋಧಿಸಿದ ಬಿಜೆಪಿ ನಿಲುವನ್ನು ಟೀಕಿಸಿದ ಅವರು, ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸುವುದನ್ನು ತಾನು ಬೆಂಬಲಿಸುವುದಾಗಿ ತಿಳಿಸಿದರು.
ಸುಪ್ರೀಂ ಕೋರ್ಟ್ ತೀರ್ಪನ್ನು ಸಂಭ್ರಮಿಸಬೇಕು, ಸ್ವೀಕರಿಸಬೇಕು. ತೀರ್ಪನ್ನು ವಿರೋಧಿಸುವುದಲ್ಲ ಎಂದು ಮೇವಾನಿ ಹೇಳಿದ್ದಾರೆ.