ಕೊಲ್ಲರಕೋಡಿ ಶಾಲೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಪಡೆಯುದರಲ್ಲಿ ಯಶಸ್ವಿಯಾಗಿದೆ: ಸಚಿವ ಖಾದರ್
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

ಕೊಲ್ಲರಕೋಡಿ, ಡಿ. 30: ಗ್ರಾಮೀಣ ಪ್ರದೇಶದಲ್ಲಿ ಇರುವ ಕೊಲ್ಲರಕೋಡಿ ಶಾಲೆ ಸರಕಾರದಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಪಡೆಯುದರಲ್ಲಿ ಯಶಸ್ವಿಯಾಗಿದೆ ಎಂದು ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.
ಅವರು ನರಿಂಗಾನ ಗ್ರಾಮದ ಕೊಲ್ಲರಕೋಡಿಯ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಶಿಕ್ಷಣ ನೀಡುತ್ತಾ ಬಂದಿದೆ. ಇಲ್ಲಿ ವಿದ್ಯೆ ಪಡೆದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಹೆಸರುಗಳಿಸಿದ್ದಾರೆ. ಪೋಷಕರು ಮಕ್ಕಳ ಕಲಿಕೆ ವಿಚಾರದಲ್ಲಿ ಹೆಚ್ಚಿನ ಗಮನ ನೀಡಿವ ಮೂಲಕ ಭವಿಷ್ಯದಲ್ಲಿ ನಿಮ್ಮ ಕನಸಿಗೆ ಮಕ್ಕಳು ಸಹಕಾರಿಸಲಿದ್ದಾರೆ ಎಂದು ಹೇಳಿದರು.
ಜಿ.ಪಂ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಶಿಕ್ಷಣ ಎಂಬುದು ಜೀವನ ಪ್ರಾಮುಖ್ಯ ಅಂಗವಾಗಿದೆ. ಶಿಕ್ಷಣ ಪಡೆದಾಗ ಮಾತ್ರ ಮನುಷ್ಯ ಮನುಷ್ಯನಾಗಿ ಪರಿವರ್ತನೆಯಾಗುತ್ತಾನೆ. ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವಿಸಿ ವಿದ್ಯೆ ಪಡೆದಾಗ ಮುಂದೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದು ಹೇಳಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನರಿಂಗಾನ ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್ ಮೀನಂಗೋಡಿ, ಉಪಾಧ್ಯಕ್ಷೆ ನಳಿನಾಕ್ಷಿ, ಸದಸ್ಯರಾದ ಅಬ್ದುಲ್ ಖಾದರ್, ಸುಜಾತ, ಮುರುಳೀಧರ್ ಶೆಟ್ಟಿ ಮೋರ್ಲ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್ ಕೊಲ್ಲರಕೋಡಿ, ಅಶ್ರಫ್ ಎಸ್.ಎಚ್, ಕಜೆ ಕಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕ ಮುಹಮ್ಮದ್ ಮಾಸ್ಟರ್ ಕಲ್ಕಟ್ಟ, ಸಿದ್ದೀಕ್ ಪಾರೆ, ವರ್ಕಾಡಿ ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ರಝಾಕ್, ಸ್ಥಳೀಯ ಸಿಆರ್ ಪಿ ಅಶಾಲತ, ಪ್ರೆಮಾನಂದ ರೈ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಈ ಸಂದರ್ಭ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ಭವ್ಯ ಶ್ರೀ ಬಿ.ಪಿ ಮತ್ತು ಜೀವಿತಾ ರವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶೀಲಾವತಿ ಸ್ವಾಗತಿಸಿದರು. ಸಹಶಿಕ್ಷಕ ರಘು ಎಚ್ ವಂದಿಸಿದರು. ಸಹ ಶಿಕ್ಷಕ ಬಿ.ಕೆ ವಸಂತ್ ರೈ ಕಾರ್ಯಕ್ರಮ ನಿರೂಪಿದರು.