ಪ್ರವಾದಿ ನಿಂದನೆ : ಸುವರ್ಣ ನ್ಯೂಸ್ ನಿರೂಪಕನ ವಿರುದ್ಧ ಮುಲ್ಕಿ ಮುಸ್ಲಿಂ ಐಕ್ಯ ವೇದಿಕೆ ದೂರು

ಮುಲ್ಕಿ, ಡಿ. 30: ಪ್ರವಾದಿ ಮುಹಮ್ಮದ್ (ಸ) ಅವರನ್ನು ಅವಹೇಳನಕಾರಿಯಾಗಿ ಹಾಗು ಕೋಮು ಉದ್ರೇಕ ಹೇಳಿಕೆ ಕೊಟ್ಟ ಸುವರ್ಣ ಟಿವಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮುಲ್ಕಿ ಮುಸ್ಲಿಂ ಐಕ್ಯ ವೇದಿಕೆ ವತಿಯಿಂದ ಮುಲ್ಕಿ ಠಾಣೆಗೆ ದೂರು ನೀಡಲಾಗಿದೆ ಎಂದು ನಿಯೋಗ ತಿಳಿಸಿದೆ.
ಈ ನಿಯೋಗದಲ್ಲಿ ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯ ಖತೀಬ್ ಎಸ್.ಬಿ. ದಾರಿಮಿ, ಅಬ್ದುಲ್ಲಾ ದಾರಿಮಿ ಬೈತಡ್ಕ, ಐಕ್ಯ ವೇದಿಕೆಯ ಸಂಚಾಲಕರಾದ ಇಕ್ಬಾಲ್ ಅಹ್ಮದ್ ಮುಲ್ಕಿ, ರಿಯಾಝ್ ಕಾರ್ನಾಡ್, ಅಝೀಝ್ ಅಂಗರಗುಡ್ಡೆ, ಶರೀಫ್ ಕೊಲ್ನಾಡ್, ಹಕಿಮ್ ಕಾರ್ನಾಡ್, ನೂರುಲ್ಲಾ ಕಾರ್ನಾಡ್, ಸಾದಿಕ್ ಇಂಜಿನಿಯರ್ ಕಾರ್ನಾಡ್, ಶಬೀರ್ ಕಾರ್ನಾಡ್, ಮುಹಮ್ಮದ್ ನಾಲೂರ್ ಪ್ಲಾಟ್, ಮಹರೂಫ್ ಅಂಗರಗುಡ್ಡೆ ಹಾಗೂ ಇತರರು ಉಪಸ್ಥಿತರಿದ್ದರು.
Next Story